×
Ad

ಸಿಇಟಿ : ಪುತ್ತೂರಿನ ಗೌರೀಶ್ ಕಜಂಪಾಡಿಗೆ 9ನೇ ರ್ಯಾಂಕ್

Update: 2020-08-21 23:05 IST

ಪುತ್ತೂರು : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ವೃತ್ತಿಪರ ಕೋರ್ಸುಗಳಿಗೆ ನಡೆಸಿದ ಪ್ರಸ್ತುತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿ ಗೌರೀಶ್ ಕಜಂಪಾಡಿ ಅವರು ಇಂಜಿನಿಯರಿಂಗ್‍ನಲ್ಲಿ ರಾಜ್ಯದಲ್ಲಿ 9ನೇ ರ್ಯಾಂಕ್ ಹಾಗು ಫಾರ್ಮಾದಲ್ಲಿ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

99.864 ಅಂಕಗಳೊಂದಿಗೆ ಜಿಇಇ 2020 ದಕ್ಷಿಣ ಕನ್ನಡದ ಟಾಪರ್ ಹಾಗೂ ಕೆವಿಪಿವೈ 2019 ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 454ನೇ ರ್ಯಾಂಕ್ ಸಾಧನೆಯನ್ನು ಮಾಡಿರುವ ಗೌರೀಶ್ ಕಜಂಪಾಡಿ ಅವರು ಪೆರ್ಲ ಕಜಂಪಾಡಿಯ ಬಾಲರಾಜ್ ಮತ್ತು ರಾಜನಂದಿನಿ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News