×
Ad

ಕಾಸರಗೋಡು ಜಿಲ್ಲೆಯಲ್ಲಿ 119 ಮಂದಿಗೆ ಕೊರೋನ ಸೋಂಕು ದೃಢ

Update: 2020-08-22 20:06 IST

ಕಾಸರಗೋಡು : ಜಿಲ್ಲೆಯಲ್ಲಿ  ಶನಿವಾರ 119 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸಂಪರ್ಕ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು 116 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇಬ್ಬರು ವಿದೇಶ ಹಾಗೂ ಓರ್ವ ಹೊರರಾಜ್ಯದಿಂದ ಬಂದವರು . 47 ಮಂದಿ  ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 3,891ಕ್ಕೆ ತಲಪಿದೆ. 2,838 ಮಂದಿ ಗುಣಮುಖರಾಗಿದ್ದು, 1023 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ  32, ಅಜಾನೂರು 14, ತ್ರಿಕ್ಕರಿಪುರ 10, ಚೆಮ್ನಾಡ್ 7,  ಚೆಂಗಳ 6,  ಕಾಞಂಗಾಡ್ , ಚೆರ್ವತ್ತೂರು ತಲಾ 5, ಮೊಗ್ರಾಲ್ ಪುತ್ತೂರು, ಪಿಲಿಕ್ಕೋಡ್ , ಉದುಮ ತಲಾ 4, ಬೇಡಡ್ಕ, ಪುಲ್ಲೂರು ಪೆರಿಯ, ಬದಿಯಡ್ಕ ತಲಾ 3, ಪಳ್ಳಿಕೆರೆ, ಪಡನ್ನ, ಪನತ್ತಡಿ ತಲಾ ಎರಡು, ಕುಂಬಳೆ, ಕೋಡೋ ಬೇಳೂರು, ಕಿನಾನೂರು ಕರಿಂದಲ, ಕಯ್ಯೂರು ಚಿಮೇನಿ, ಪೈವಳಿಕೆ, ದೇಲಂಪಾಡಿ, ಕುತ್ತಿಕೋಲ್ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಬದಿಯಡ್ಕ ಗ್ರಾಮ ಪಂಚಾಯತ್ ನ 1 ಮತ್ತು 5ನೇ ಹಾಗೂ ಮುಳಿಯಾರಿನ ಎಂಟನೇ ವಾರ್ಡ್ ಹಾಟ್ ಸ್ಪಾಟ್ ಆಗಿ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News