×
Ad

ತೊಕ್ಕೊಟ್ಟು: ರಿಕ್ಷಾ ಚಾಲಕರಿಗೆ 'ಚಾಲಕ್ ಸಾಥ್' ಪರಿಹಾರ ಧನ ವಿತರಣೆ

Update: 2020-08-22 20:32 IST

ಉಳ್ಳಾಲ: ಕೊರೋನ ತೀವ್ರಗೊಂಡ ಸಂದರ್ಭದಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾತ್ರ ಮಾಡಿದೆ ಹೊರತು ಶ್ರಮಜೀವಿಗಳಿಗೆ ಸಹಕಾರ ನೀಡುವ ಕೆಲಸ ಮಾಡಿಲ್ಲ.  ರಿಕ್ಷಾ ಚಾಲಕರ, ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುವಲ್ಲಿ ವಿಫಲವಾಗಿದೆ. ಇದರಿಂದ ಸಂಕಷ್ಟ ಕ್ಕೀಡಾಗಿರುವ ಶ್ರಮಜೀವಿಗಳಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಹಕಾರ ನೀಡುತ್ತಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ನ ಜಿಲ್ಲಾ ಕಾರ್ಯದರ್ಶಿ ದಿವಾಕರ ಹೇಳಿದರು.

ಅವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಆಶ್ರಯದಲ್ಲಿ. ತೊಕ್ಕೊಟ್ಟುವಿನಲ್ಲಿ ಶನಿವಾರ ನಡೆದ ತೊಕ್ಕೊಟ್ಟು ಮತ್ತು ಕಲ್ಲಾಪು ರಿಕ್ಷಾ ಚಾಲಕರಿಗೆ 'ಚಾಲಕ್ ಸಾಥ್' ಪರಿಹಾರ ಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವೆಲ್ಫೇರ್ ಪಾರ್ಟಿಯ ಮಂಗಳೂರು ಕ್ಷೇತ್ರದ ಕಾರ್ಯದರ್ಶಿ ಫಾರೂಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರ. ಕಾರ್ಯದರ್ಶಿ ಮುತ್ತಲಿಬ್, ಕ್ಷೇತ್ರಾಧ್ಯಕ್ಷ ಹನೀಫ್ ತಲಪಾಡಿ ಮಾತನಾಡಿದರು‌. ಈ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಪರಿಹಾರ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.

ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ನ ಜಿಲ್ಲಾ ಅಧ್ಯಕ್ಷ ಜಲೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News