ಮಹಾತ್ಮಾ ಗಾಂಧೀಜಿಯವರ ಕನ್ನಡಕ 2.5 ಕೋಟಿ ರೂ.ಗೆ ಹರಾಜು

Update: 2020-08-22 18:06 GMT

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಧರಿಸಿದ್ದರು ಎಂದು ನಂಬಲಾದ ಕನ್ನಡಕವೊಂದು ಬ್ರಿಟನ್ ನಲ್ಲಿ ನಡೆದ ಹರಾಜಿನಲ್ಲಿ 2.5 ಕೋಟಿ ರೂ.ಗೆ ಹರಾಜಾಗಿದೆ.

ಬ್ರಿಸ್ಟೋಲ್ ನಲ್ಲಿ ಹರಾಜು ಪ್ರಕ್ರಿಯೆ ಆರಂಭಗೊಂಡ 6 ನಿಮಿಷಗಳಲ್ಲೇ ಅಮೆರಿಕದ ಕಲೆಕ್ಟರ್ ಒಬ್ಬರು ಕನ್ನಡಕವನ್ನು ಖರೀದಿಸಿದರು. ಲೆಟರ್ ಬಾಕ್ಸ್ ನಲ್ಲಿ ಈ ಕನ್ನಡಕವನ್ನು ಹಾಕಿದ್ದ ವ್ಯಕ್ತಿಯೊಬ್ಬರು ಇದು ಮಹಾತ್ಮಾ ಗಾಂಧೀಜಿಯವರು ತನ್ನ ಚಿಕ್ಕಪ್ಪನಿಗೆ ನೀಡಿದ್ದ ಕನ್ನಡಕ ಎಂದಿದ್ದರು ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News