×
Ad

ಬಂಟ್ವಾಳ: ಅಮೆಚೂರು ಕಬಡ್ಡಿ ಅಸೋಸಿಯೇಶನ್ ನಿಂದ ಎಸೆಸೆಲ್ಸಿ ಸಾಧಕ ಮಿಥಿಲ್ ಗೆ ಸನ್ಮಾನ

Update: 2020-08-23 09:48 IST

ವಿಟ್ಲ, ಆ.23: ಅಮೆಚೂರು ಕಬಡ್ಡಿ ಅಸೋಸಿಯೇಶನ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡ್ - ಪರ್ಲಿಯದಲ್ಲಿ ಶನಿವಾರ ನಡೆಯಿತು.

ಅಸೋಸಿಯೇಶನ್ ನ ಸಕ್ರಿಯ ಸದಸ್ಯ, ಕಾವಳಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ-ಶಿಕ್ಷಕ ಜಯರಾಮ ಹಾಗೂ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಅನಿತಾ ದಂಪತಿಯ ಪುತ್ರ ಬಂಟ್ವಾಳ ಎಸ್.ವಿ.ಎಸ್.ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮಿಥಿಲ್ ಜೆ. 615 ಅಂಕಗಳೊಂದಿಗೆ ಶೇ.98.4 ಫಲಿತಾಂಶ ದಾಖಲಿಸಿದ್ದರು. ಈ ಸಾಧನೆಗಾಗಿ ಮಿಥಿಲ್ ರನ್ನು ಪರ್ಲಿಯಾದಲ್ಲಿರುವ ಆತನ ನಿವಾಸದಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. 

ಬಂಟ್ವಾಳ ತಾಲೂಕು  ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಶನ್ ನ ಗೌರವಾಧ್ಯಕ್ಷ ರೋಟೇರಿಯನ್ ಮಂಜುನಾಥ್, ಕಾರ್ಯಾಧ್ಯಕ್ಷ ಪುಷ್ಪರಾಜ್ ಚೌಟ, ಉಪಾಧ್ಯಕ್ಷರುಗಳಾದ ಲೋಕನಾಥ ಶೆಟ್ಟಿ, ಬಾಬು ಮಾಸ್ಟರ್, ಸೇಸಪ್ಪ ಮಾಸ್ಟರ್, ರೆಫ್ರಿ ಬೋರ್ಡ್ ಕನ್ವೀನರ್ ಕೃಷ್ಣಪ್ಪ ಬಂಗೇರ, ಕೋಶಾಧಿಕಾರಿ ಉಮಾನಾಥ ರೈ ಮೇರಾವು, ಮಾಜಿ ಯೋಧ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಅಸೋಸಿಯೇಶನ್ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಕರ್ಣ ಸ್ವಾಗತಿಸಿ, ವಂದಿಸಿದರು. ಜೊತೆ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News