ಪಾಕ್ ಗೆ ಕಪ್ಪುಪಟ್ಟಿ ಭೀತಿ: ದಾವೂದ್ ಇಬ್ರಾಹಿಂಗೆ ನಿರ್ಬಂಧ
ಇಸ್ಲಾಮಾಬಾದ್, ಆ.23: ಪ್ಯಾರೀಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರಿಸುವ ಭೀತಿ ಹಿನ್ನೆಲೆಯಲ್ಲಿ ಪಾಕಿಸ್ತಾನವು ವಿವಿಧ ಉಗ್ರ ಸಂಘಟನೆಗಳ ಸದಸ್ಯರು ಮತ್ತು 88 ಮಂದಿ ಮುಖ್ಯಸ್ಥರಿಗೆ ನಿರ್ಬಂಧ ವಿಧಿಸಿ ಅಧಿಸೂಚನೆ ಹೊರಡಿಸಿದೆ.
ನಿರ್ಬಂಧಿತ ಮುಖಂಡರ ಪೈಕಿ 1993ರ ಮುಂಬೈ ಸ್ಫೋಟದ ಮಾಸ್ಟರ್ಮೈಂಡ್ ದಾವೂದ್ ಇಬ್ರಾಹೀಂ ಮತ್ತು ಎಲ್ಇಡಿ ಕಮಾಂಡರ್, 26/11 ದಾಳಿ ಆರೋಪಿ ಝಾಕಿರ್ ರಹ್ಮಾನ್ ಲಕ್ವಿ ಸೇರಿದ್ದಾನೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಪಟ್ಟಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 18ರಂದು ಬಿಡುಗಡೆ ಮಾಡಲಾದ 2020ರ ಶಾಸನಬದ್ಧ ಅಧಿಸೂಚನೆಯಲ್ಲಿ, ಕರಾಚಿಯಲ್ಲಿರುವ ದಾವೂದ್ ಇಬ್ರಾಹೀಂ ವೈಟ್ಹೌಸ್ ವಿಳಾಸವನ್ನು ನಮೂದಿಸಲಾಗಿದೆ. ಭಾರತೀಯ ಅಧಿಕಾರಿಗಳ ಪ್ರಕಾರ, ಈ ಭೂಗತ ಪಾತಕಿ ಪಾಕಿಸ್ತಾನದಲ್ಲಿ ಇರುವ ಬಗ್ಗೆ ಆ ದೇಶ ಒಪ್ಪಿಕೊಳ್ಳುತ್ತಿರುವುದು ಇದೇ ಮೊದಲು. 2015 ಮತ್ತು 2019ರ ಪಟ್ಟಿಯಲ್ಲೂ ಈ ಎರಡೂ ಹೆಸರುಗಳನ್ನು ಸೇರಿಸಲಾಗಿತ್ತು