ಮಂಗಳೂರು ಟ್ರಾನ್ಸ್ ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟ್ಸ್ ಅಸೋಸಿಯೇಶನ್ ನಿಂದ ಆಯುಷ್ಮಾನ್ ಉಚಿತ ನೋಂದಣಿ ಕಾರ್ಯಕ್ರಮ
ಮಂಗಳೂರು, ಆ.23: ಸಂಘ ಸಂಸ್ಥೆಗಳು ಸರಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮಾದರಿ ಕಾರ್ಯ ಎಂದು ಶಾಸಕ ಡಾ. ವೈ.ಭರತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಟ್ರಾನ್ಸ್ ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟ್ಸ್ ಅಸೋಸಿಯೇಶನ್ ಅಸೋಸಿಯೇಶನ್ ವತಿಯಿಂದ ಸದಸ್ಯರುಗಳಿಗೆ ಹಾಗೂ ನೌಕರ ವೃಂದ ಮತ್ತು ಕುಟುಂಬದವರಿಗೆ ಕೇಂದ್ರ ಸರಕಾರದ ಯೋಜನೆಯಾದ ಆಯುಷ್ಮಾನ್ ಭಾರತ ಇದರ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಗುರುತಿನ ಚೀಟಿ ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಅಪಘಾತವಾಗಿ ಗಂಭೀರ ಗಾಯಗಳಾದ ಸಂದರ್ಭದಲ್ಲಿ ಮಧ್ಯಮ ವರ್ಗದ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸುವುದು ದೊಡ್ಡ ಸವಾಲಾಗುತ್ತದೆ. ಅಂತಹ ಸಂದರ್ಭದಲ್ಲಿ ವೆನಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ಲಿಖಿತ ಪತ್ರದೊಂದಿಗೆ ಬಿಪಿಎಲ್ ಕಾರ್ಡ್ ನವರು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಯಾವುದೇ ವಿವಿಧ ಚಿಕಿತ್ಸೆಗಳಿಗೆ 5 ಲಕ್ಷದ ತನಕ ಯಾವುದೇ ಹಣ ಪಾವತಿಸದೆ ಆಯುಷ್ಮಾನ್ ಭಾರತ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯರುಗಳಾದ ಸುಮಿತ್ರಾ ಕರಿಯ, ವರುಣ್ ಚೌಟ, ಸುನೀತಾ, ಅಸೋಸಿಯೇಶನ್ ಅಧ್ಯಕ್ಷ ಚಿತ್ತರಂಜನ್ ಹಾಗೂ ಅಸೋಸಿಯೇಶನ್ ಸದಸ್ಯರು ಉಪಸ್ಥಿತರಿದ್ದರು.