ಬೆಳುವಾಯಿ: 'ಖಲಂದರ್ ಚಾರಿಟೇಬಲ್ ಟ್ರಸ್ಟ್' ನೂತನ ಕಚೇರಿ ಉದ್ಘಾಟನೆ
ಮೂಡುಬಿದಿರೆ, ಆ. 23: ಇಲ್ಲಿನ ಬೆಳುವಾಯಿಯ ಖಲಂದರ್ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮವು ರವಿವಾರ ನಡೆಯಿತು.
ಸಂಸ್ಥೆಯ ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಬೆಳುವಾಯಿ, ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಸಲೀಂ, ಅಬೂಬಕರ್ ಸಿದ್ದೀಕ್, ಮಸೀದಿಯ ಅಧ್ಯಕ್ಷ ನಝೀರ್ ಫಕೀರ್ ಸಾಹೇಬ್ ಜಂಟಿಯಾಗಿ ಉದ್ಘಾಟಿಸಿದರು.
ಇದೇ ವೇಳೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದ ಊರಿನ ಮೌಲಾನಾ ಅಬ್ದುಲ್ ರಶೀದ್ ಅವರಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಿಕೊಟ್ಟ ‘ಮೌಲಾನಾ ಸ್ಟೋರ್’ನ್ನು ಉದ್ಘಾಟಿಸಲಾಯಿತು.
ಟ್ರಸ್ಟ್‌ನ ಕೋಶಾಧಿಕಾರಿ ನಾಸಿರ್ ಹುಸೈನ್ ಅವರ ಪುತ್ರಿ ನಿಧಾ ಅವರ ಕೈಬರಹದಲ್ಲಿ ಮೂಡಿಬಂದ ‘ಆಯತುಲ್ ಕುರ್ಸಿ’ಯನ್ನು ಈ ಸಂದರ್ಭ ಅನಾವರಣಗೊಳಿಸಲಾಯಿತು.
ಮುಖ್ಯ ಅತಿಥಿಯಾಗಿ ಜಾಮಿಯಾ ಮಸೀದಿ ಹಾಲ್ನ ಅಧ್ಯಕ್ಷ ಮುಹಮ್ಮದ್ ಅಸ್ಗರ್, ಖಲೀಲ್ ಅಜೆಕಾರ್, ಅನ್ವರ್ ಅಜೆಕಾರ್, ಅಬ್ದುಲ್ ರಶೀದ್ ಬೆಳುವಾಯಿ, ದಿಲ್ವಾರ್ ಅಹ್ಮದ್, ನೌಶಾದ್ ಉಪಸ್ಥಿತರಿದ್ದು, ಶುಭಹಾರೈಸಿದರು.
ಮೊಹಿದ್ದೀನ್ ಗುಂಡುಕಲ್ಲು, ಮುಹಮ್ಮದ್ ಶರೀಫ್ ದರ್ಕಸ್ಸು , ಮೌಲಾನಾ ಅಬ್ದುಲ್ ರಶೀದ್, ಬಿಸಿಸಿ ಕಾರ್ಯದರ್ಶಿ ರಿಹಾನ್, ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ಅಧ್ಯಕ್ಷ ಸುಲೈಮಾನ್ ಶೇಕ್ ಬೆಳುವಾಯಿ ‘ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನಿಂದ ಪ್ರೇರಿತರಾಗಿ ನಮ್ಮ ಕುಟುಂಬದ ಸದಸ್ಯರು ಒಗ್ಗೂಡಿ ಈ ಟ್ರಸ್ಟ್ ರೂಪಿಸಿದ್ದೇವೆ. ಸಮಾಜ ಸೇವೆಯೇ ನಮ್ಮ ಗುರಿಯಾಗಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಸ್ವಾಗತಿಸಿದರು. ಕೋಶಾಧಿಕಾರಿ ನಾಸಿರ್ ಹುಸೈನ್ ವಂದಿಸಿದರು.