×
Ad

ಸುನಿಲ್ ನಾಯಕ್‌ಗೆ ಪ್ಲಾಸ್ಮಾ ದಾನ ಮಾಡಿದ ಫೈಝಲ್ ಜೋಕಟ್ಟೆ, ಸೈಯದ್ ಇಬ್ರಾಹೀಂ

Update: 2020-08-23 21:05 IST

ಮಂಗಳೂರು, ಆ. 23: ನಗರದ ಎ.ಜೆ. ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಸುನಿಲ್ ನಾಯಕ್ ಎಂಬವರಿಗೆ ಫೈಝಲ್ ಜೋಕಟ್ಟೆ, ಸೈಯದ್ ಇಬ್ರಾಹೀಂ ರವಿವಾರ ಪ್ಲಾಸ್ಮಾ ದಾನ ಮಾಡಿದ್ದಾರೆ.

ಯುನೈಟೆಡ್ ಬ್ಲಡ್ ಕರ್ನಾಟಕ ಸಹಕಾರದೊಂದಿಗೆ ಫೈಝಲ್ ಜೋಕಟ್ಟೆ, ಸೈಯದ್ ಇಬ್ರಾಹೀಂ ಅವರು ಬೆಂಗಳೂರಿಗೆ ತೆರಳಿ, ಅಲ್ಲಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಅಲ್ಲಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಬಂದು ಎ.ಜೆ. ಆಸ್ಪತ್ರೆಗೆ ನೀಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸುನಿಲ್ ನಾಯಕ್‌ಗೆ ದಾನ ಮಾಡಲಾಗಿದೆ.

ಜಿಲ್ಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ಲಾಸ್ಮಾ ದಾನ ಮಾಡುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ಸೋಂಕಿನಿಂದ ಗುಣಮುಖ ರಾದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಮಾ ದಾನ ಮಾಡಬಹುದು. ಇದರಿಂದ ರೋಗಿಗಳ ಜೀವ ಉಳಿಸಿದ ಧನ್ಯತೆ ಪಡೆಯಬಹುದು ಎಂದು ಯುನೈಟೆಡ್ ಬ್ಲಡ್ ಕರ್ನಾಟಕದ ಅಧ್ಯಕ್ಷ ನಝೀರ್ ಕಂದಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News