×
Ad

ಅಡ್ಡೂರು: ಮರ್ಹೂಂ ಫಾರೂಕ್ ಸ್ಮರಣಾರ್ಥ ರಕ್ತದಾನ ಶಿಬಿರ

Update: 2020-08-23 21:46 IST

ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಫೈವ್ ಸ್ಟಾರ್ ಯಂಗ್ ಬಾಯ್ಸ್  ಅಡ್ಡೂರು ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಭಾಗಿತ್ವದಲ್ಲಿ ಮರ್ಹೂಂ ಫಾರೂಕ್ ಅವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ಅಡ್ಡೂರಿನ ಅಲ್ ಮದ್ರಸತುಲ್ ಬದ್ರಿಯಾ ಸಭಾಂಗಣದಲ್ಲಿ ರವಿವಾರ ನಡೆಯಿತು.

ಬದ್ರಿಯಾ ಜುಮಾ ಮಸೀದಿ ಅಡ್ಡೂರು ಖತೀಬ್ ಶರೀಫ್ ದಾರಿಮಿ ದುಃವಾಶೀರ್ವಚನದ ಮೂಲಕ ಚಾಲನೆಗೊಂಡ ಕಾರ್ಯಕ್ರಮವನ್ನು ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷ ಹಬೀಬ್ ಕಟ್ಟಪುಣಿ ಅಧ್ಯಕ್ಷತೆ ವಹಿಸಿದ್ದರು.

ಕೊರೋನ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 125 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಯು.ಪಿ ಇಬ್ರಾಹಿಮ್ ಮಾತನಾದರು.ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಲಹೆಗಾರರಾದ ಮುಸ್ತಫಾ ಅಡ್ಡೂರು ದೆಮ್ಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಹ್ಮದ್ ಬಾವ, ಝೈನುದ್ದೀನ್ ಡೆಲ್ಮ, ನಿಸಾರ್ ಉಳ್ಳಾಲ, ಸಾದಿಕ್ ಗುಡ್ಡೆ, ಎ.ಕೆ.ಮೊಹಮ್ಮದ್, ಎ.ಕೆ. ಅಶ್ರಫ್, ಎ.ಕೆ. ರಿಯಾಝ್, ನೌಫಲ್ ಗೋಳಿಪಡ್ಪು, ಸುಭಾಶ್ಚಂದ್ರ ಕಾಂಜಿಲಕೋಡಿ, ಉಮ್ಮರ್ ಕಟ್ಟಪುಣಿ, ಮುಝಮ್ಮಿಲ್ ನೂಯಿ, ಕಮಲ್ ಕಾಂಜಿಲಕೋಡಿ, ಮನ್ಸೂರ್ ಮಂಜೊಟ್ಟಿ, ಲತೀಫ್ ಕಟ್ಟಪುಣಿ ಹಾಗೂ ಫೈವ್ ಸ್ಟಾರ್ ಯಂಗ್ ಬಾಯ್ಸ್ ಪದಾಧಿಕಾರಿಗಳು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News