ಮೂಡಬಿದ್ರೆ : ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್ಡಿಪಿಐಯಿಂದ ಪುರಸಭೆ ಆಯುಕ್ತರಿಗೆ ಮನವಿ
Update: 2020-08-24 18:02 IST
ಮೂಡಬಿದ್ರೆ : ಪುರಸಭೆ ವ್ಯಾಪ್ತಿಯ ಕೋಟೆಬಾಗಿಲು 10 ಮತ್ತು11ನೇ ವಾರ್ಡಿನ ಹದಗೆಟ್ಟ ರಸ್ತೆ, ಚರಂಡಿ, ರಸ್ತೆ ಬದಿ ಪೊದೆ ಬೆಳೆದು ವಾಹನ ಸವಾರರಿಗೆ ಹಾಗೂ ಜನರಿಗೆ ನಡೆದಾಡಲು ತೊಂದರೆಯಾಗುತ್ತಿದ್ದು, ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಲು ಒತ್ತಾಯಿಸಿ ಎಸ್ ಡಿಪಿಐ ಮೂಡಬಿದ್ರೆ ವಲಯ ಸಮಿತಿ ವತಿಯಿಂದ ಪುರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಎಸ್ ಡಿಪಿಐ ಮುಲ್ಕಿ- ಮೂಡಬಿದ್ರೆ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಸದಸ್ಯರಾದ ಇಬ್ರಾಹಿಂ ಹಂಡೇಲು, ಪಿಎಫ್ಐ ಮೂಡಬಿದ್ರೆ ಡಿವಿಜನ್ ಅಧ್ಯಕ್ಷರಾದ ನಾಸಿರ್ ಬೆಳುವಾಯಿ, ಎಸ್ ಡಿ ಟಿ ಯು ಮೂಡಬಿದ್ರೆ ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಅನ್ವರ್ ಗಂಟಲ್ಕಟ್ಟೆ, ಶೆಹರಾಝ್, ಅಶ್ರಫ್ ಉಪಸ್ಥಿತರಿದ್ದರು.