×
Ad

ಪ್ರೊ.ಸಿ.ಎನ್.ಶ್ರೀಧರನ್ ನಿಧನ

Update: 2020-08-24 18:15 IST

ಮಣಿಪಾಲ, ಆ.24: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಹಿಂದಿನ ಮಣಿಪಾಲ ಇಂಜಿನಿಯರಿಂಗ್ ಕಾಲೇಜು)ಯ ಪ್ರಾರಂಭಿಕ ಪ್ರಾಧ್ಯಾಪಕ ರಲ್ಲಿ ಒಬ್ಬರಾದ ಪ್ರೊ.ಸಿಎನ್‌ಎಸ್ ಎಂದೇ ಖ್ಯಾತಿಯನ್ನು ಪಡೆದ ಪ್ರೊ.ಸಿ.ಎನ್.ಶ್ರೀಧರನ್ ಅವರು ಕೇರಳ ಎರ್ನಾಕುಲಂನಲ್ಲಿರುವ ತನ್ನ ಪುತ್ರಿಯ ಮನೆಯಲ್ಲಿ ರವಿವಾರ ಅಪರಾಹ್ನ ನಿಧನರಾದರು. ಅವರಿಗೆ 89 ವರ್ಷ ಪ್ರಾಯವಾಗಿತ್ತು.

1959ರಲ್ಲಿ ಎಂಐಟಿ ಪ್ರಾರಂಭಗೊಂಡಾಗ ಅದರ ಗಣಿತ ವಿಭಾಗದಲ್ಲಿ ಪ್ರಾದ್ಯಾಪಕರಾಗಿ ಸೇವೆಗೆ ಸೇರಿದ ಶ್ರೀಧರನ್, 35 ಸುಧೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ವಿಭಾಗ ಮುಖ್ಯಸ್ಥರಾಗಿ 1994ರಲ್ಲಿ ಸೇವಾನಿವೃತ್ತರಾಗಿದ್ದರು. ಅಂದಿನ ಮಣಿಪಾಲ ಇಂಜಿನಿಯರಿಂಗ್ ಕಾಲೇಜು ಸೇರುವ ಮೊದಲು ಅವರು ಕೇರಳದ ಚೇರ್ಕಳ ಬೋರ್ಡ್ ಹೈಸ್ಕೂಲ್ ಹಾಗೂ ಮಂಗಳೂರಿನ ಸೈಂಟ್ ಅಲಾಸಿಯಸ್ ಕಾಲೇಜಿನಲ್ಲಿ ಒಟ್ಟು ಏಳು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ ಸ್ನೇಹಪರ ವ್ಯಕ್ತಿತ್ವ, ಮಾನವೀಯ ನಡವಳಿಕೆ ಹಾಗೂ ಅತ್ಯುತ್ತಮ ಬೋಧಕರಾಗಿ ಅವರು ವಿದ್ಯಾರ್ಥಿ ಸಮುದಾಯದಲ್ಲಿ ಅತ್ಯಂತ ಜನಪ್ರಿಯರಾ ಗಿದ್ದರು. ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ, ಜ್ಞಾನದೊಂದಿಗೆ, ಕ್ಯಾಂಪಸ್‌ನಲ್ಲಿ ಇತರ ಚಟುವಟಿಕೆಗಳಲ್ಲಿ ಅವರ ಸಕ್ರೀಯರಾಗಿ, ವಿದ್ಯಾರ್ಥಿಗಳು, ಸಹ ಪ್ರಾಧ್ಯಾಪಕರು ಇವುಗಳಲ್ಲಿ ತೊಡಗುವಂತೆ ಮಾಡುತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News