×
Ad

ಸೆ.1ರಿಂದ ಬಿಎ/ಬಿಕಾಂ ಪೂರಕ ಮತ್ತು ಎಂಬಿಎ ಪರೀಕ್ಷೆ

Update: 2020-08-24 20:01 IST

 ಉಡುಪಿ, ಆ.24: ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯದಲ್ಲಿ ಬಿ.ಎ/ಬಿಕಾಂ ಪೂರಕ ಮತ್ತು ಎಂಬಿಎ ಸೆಮಿಸ್ಟರ್ ಪರೀಕ್ಷೆಗಳನ್ನು ಪೆಬ್ರವರಿ/ಮಾರ್ಚ್ ತಿಂಗಳಲ್ಲಿ ಮಾ.13ರವರೆಗೆ ನಡೆಸಲಾಗಿದ್ದು, ಬಳಿಕ ಕೋವಿಡ್-19 ಸಂಕ್ರಾಮಿಕ ರೋಗದಿಂದ ಸರಕಾರದ ನಿರ್ದೇಶನದಂತೆ ಉಳಿದ ಪರೀಕ್ಷೆಗಳನ್ನು ಮುಂದೂಡ ಲಾಗಿತ್ತು.

ಇದೀಗ ಮುಂದೂಡಲಾದ ಪರೀಕ್ಷೆಗಳನ್ನು ಯುಜಿಸಿಯ ಮಾರ್ಗ ಸೂಚನೆ ಯಂತೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಸೆ.1ರಿಂದ ಹಾಗೂ ಎಂಬಿಎ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟಂಬರ್ 5ರಿಂದ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಸಲಾಗುತ್ತದೆ.

ಪರೀಕ್ಷಾ ವೇಳಾಪಟ್ಟಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ -www.ksoumysuru.ac.in - ಪ್ರಕಟಿಸಲಿದ್ದು, ವಿದ್ಯಾರ್ಥಿಗಳು ಇದರಂತೆ ಪರೀಕ್ಷೆಗಳಿಗೆ ಹಾಜರಾಗುವಂತೆ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಡಾ. ಕೆ.ಪಿ.ಮಹಾಲಿಂಗಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News