×
Ad

ಉಡುಪಿ: ಆಯುಷ್ಮಾನ್ ಮಾಹಿತಿ ಕಾರ್ಯಾಗಾರ

Update: 2020-08-24 20:50 IST

ಉಡುಪಿ, ಆ.24: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ತಾಲೂಕು ಮಟ್ಟದ ಆಯುಷ್ಮಾನ್ ಕಾರ್ಡ್ ಹಾಗೂ ಸಾಂಘಿಕ ಕಾರ್ಯಾಗಾರವನ್ನು ಆ.25ರಂದು ಕಾರ್ಕಳ, ಕಾಪು, ಉಡುಪಿ ಮತ್ತು 27ರಂದು ಕುಂದಾಪುರ, ಬೈಂದೂರು ಹಾಗೂ 29ರಂದು ಬ್ರಹ್ಮಾವರ ತಾಲೂಕು ಗಳಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ಎಸ್‌ಜೆ.ಎಂ., ಎಸ್‌ವೈಎಸ್, ಎಸ್ಸೆಸ್ಸೆಫ್ ಹಾಗೂ ಎಸ್‌ಡಿಐ ನಾಯಕರು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕೋವಿಡ್-19 ಸುನ್ನೀ ಹೆಲ್ಪ್ ಡೆಸ್ಕ್ ತಂಡವನ್ನು ಹಾಗೂ ವಿಪತ್ತುಗಳ ಸಂರಕ್ಷಣಾ ತಂಡವನ್ನೂ ರಚಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News