×
Ad

ಬೆಣಂದೂರುನಲ್ಲಿ ಕೊಲೆ ಪ್ರಕರಣ : 8 ಮಂದಿ ಆರೋಪಿಗಳು ಸೆರೆ

Update: 2020-08-24 20:55 IST

ಭಟ್ಕಳ: ಇತ್ತಿಚೆಗೆ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಣಂದೂರು ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಬೆಣಂದೂರು ನಿವಾಸಿ ಪದ್ಮಯ್ಯ ಜಟ್ಟಾ ನಾಯ್ಕ (44) ಅವರನ್ನು ಅ.14ರಂದು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಣಂದೂರು ನಿವಾಸಿ ಜಯಂತ ಬಲೀಂದ್ರ ನಾಯ್ಕ, ಮಂಜುನಾಥ ಬಲೀಂದ್ರ ನಾಯ್ಕ, ದೇವೇಂದ್ರ ಬಲೀಂದ್ರ ನಾಯ್ಕ, ಸುಬ್ರಹ್ಮಣ್ಯ ಬಲೀಂದ್ರ ನಾಯ್ಕ, ಬಲೀಂದ್ರ ಹೊನ್ನಪ್ಪ ನಾಯ್ಕ, ಮಹೇಶ ಜಟ್ಟಪ್ಪ ನಾಯ್ಕ, ಸುರೇಶ ಮಾದೇವ ನಾಯ್ಕ, ಸುನೀಲ್ ಮಾದೇವ ನಾಯ್ಕ ಇವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒರ್ವ ಕೋವಿಡ್ ಸೋಂಕಿತನಾಗಿದ್ದು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿತರ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲೆಯ ಮೊಲೀಸ ಅಧೀಕ್ಷಕ ಶಿವಪ್ರಕಾಶ ದೇವರಾಜ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್ ಮಾರ್ಗದರ್ಶನದಲ್ಲಿ ಎಎಸ್‍ಪಿ ನಿಖಿಲ್ ಬಿ, ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡ ರಚಿಸಲಾಗಿತ್ತು. ತಂಡದ ಉಸ್ತುವಾರಿಯನ್ನು ಸಿ.ಪಿ.ಐ ದಿವಾಕರ ಪಿ. ವಹಿಸಿದ್ದರು. ಒಂದು ತಂಡವನ್ನು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಾಗೂ ಇನ್ನೊಂದು ತಂಡವನ್ನು ಬೆಳಗಾವಿಯ ಗೋಕಾಕ ತಾಲೂಕಿನ ಮೂಡಲಗಿಗೆ ಹಾಗೂ 3 ನೇ ತಂಡ ಭಟ್ಕಳದಲ್ಲಿ ಕಾರ್ಯಚರಣೆ ನಡೆಸಿದೆ. ಆರೋಪಿತರನ್ನು ಬಂಧಿಸಿದ ಪೊಲೀಸರು ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News