×
Ad

ಉರ್ವ ಪೊಲೀಸ್ ಠಾಣೆಯಲ್ಲಿ ವನಮಹೋತ್ಸವ ಆಚರಣೆ

Update: 2020-08-24 20:57 IST

ಮಂಗಳೂರು, ಆ. 24: ಪ್ರಕೃತಿ ಸಂರಕ್ಷಣೆಗೆ ಆದ್ಯತೆ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಗಿಡಗಳನ್ನು ನೆಟ್ಟು ಬೆಳೆಸಿ, ಪೋಷಿಸಿ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಉರ್ವ ಪೊಲೀಸ್ ಠಾಣೆಯ ಮುಖ್ಯ ನಿರೀಕ್ಷಕ ಮುಹಮ್ಮದ್ ಶರೀಫ್ ಹೇಳಿದರು.

ರೋಟರಿ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರವಿವಾರ ಠಾಣೆಯ ಆವರಣದಲ್ಲಿ ಆಯೋಜಿಸಿದ ವನಮಹೋತ್ಸವ ಅಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯ ಸರಕಾರಿ ಅಧಿಕಾರಿ ಸುನಿಲ್ ಬಾಳಿಗಾ ಗೌರವ ಅತಿಥಿಯಾಗಿ ಪಾಲ್ಗೊಂಡು 50 ಫಲ ನೀಡುವ ಗಿಡಗಳನ್ನು ಸಂಸ್ಥೆಗೆ ಹಸ್ತಾಂತರಿಸಿದರು. ರೋಟರಿ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಪ್ರಕಾಶ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು. ರೋಟರ್ಯಾಕ್ಟ್ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಮಾತನಾಡಿದರು.

ಈ ಸಂದರ್ಭ ರೋಟರ್ಯಾಕ್ಟ್ ಸಂಸ್ಥೆಯ ಪದಾಧಿಕಾರಿಗಳಾದ ಶೆಲ್ಡಾನ್ ಆಲ್ವಾರಿಸ್, ಕೆರಲ್ ಪೆರ್ನಾಂಡಿಸ್, ಸುದೀಪ್, ಗಿರೀಶ್, ಮಾಜಿ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಜಾಕ್ಸನ್ ಸಲ್ಡಾನ, ಠಾಣೆಯ ಉಪ ನಿರೀಕ್ಷಕರಾದ ಧನರಾಜ್, ಶ್ರೀಕಲಾ, ಸಹಾಯಕ ನಿರೀಕ್ಷಕರಾದ ಸಂಗೀತಾ, ದೇಜಪ್ಪ, ಬಾಲಕೃಷ್ಣ, ವಿನಯಕುಮಾರ್ ಉಪಸ್ಥಿತರಿದರು.

ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಡೇರಿಲ್ ಸ್ಟೀವನ್ ಡಿಸೋಜ ಸ್ವಾಗತಿಸಿದರು. ವಲಯ ರೋಟರ್ಯಾಕ್ಟ್ ಪ್ರತಿನಿಧಿ ಶೆಲ್ಡಾನ್ ಕ್ರಾಸ್ತ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News