ನಾವು ಅಲೆಕ್ಸೀಯ ಪ್ರಾಣ ಉಳಿಸಿದ್ದೇವೆ: ರಶ್ಯ ವೈದ್ಯರು

Update: 2020-08-24 18:07 GMT

ಮಾಸ್ಕೋ (ರಶ್ಯ), ಆ. 24: ವಿಷಪ್ರಾಶನಕ್ಕೊಳಗಾಗಿದ್ದಾರೆನ್ನಲಾದ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ಮೊದಲು ಚಿಕಿತ್ಸೆ ನೀಡಿರುವ ಸೈಬೀರಿಯದ ಆಸ್ಪತ್ರೆಯ ವೈದ್ಯರು, ಅವರ ಜೀವವನ್ನು ತಾವು ಉಳಿಸಿದ್ದಾಗಿ ಸೋಮವಾರ ಹೇಳಿದ್ದಾರೆ. ಆದರೆ, ಅವರ ದೇಹ ವ್ಯವಸ್ಥೆಯಲ್ಲಿ ವಿಷದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದಿದ್ದಾರೆ.

‘‘ನಾವು ಕಠಿಣ ಪರಿಶ್ರಮದಿಂದ ಅವರ ಪ್ರಾಣವನ್ನು ಉಳಿಸಿದ್ದೇವೆ’’ ಎಂದು ಆಸ್ಪತ್ರೆಯ ಮುಖ್ಯ ವೈದ್ಯರು ಸೈಬೀರಿಯದ ಓಮ್‌ಸ್ಕ್ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘‘ಯಾವುದಾದರೂ ವಿಧದ ವಿಷವನ್ನು ನಾವು ಪತ್ತೆಹಚ್ಚಿದ್ದರೆ ಹಾಗೂ ಅದು ಖಚಿತವಾಗಿದ್ದರೆ, ಅದರಿಂದ ನಮ್ಮ ಕೆಲಸ ತುಂಬಾ ಸುಲಭವಾಗಿರುತ್ತಿತ್ತು. ಸಮಸ್ಯೆ ಏನು ಎನ್ನುವುದು ಸ್ಪಷ್ಟವಾಗಿರುತ್ತಿತ್ತು ಹಾಗೂ ಚಿಕಿತ್ಸೆಯೂ ಸುಲಭವಾಗಿರುತ್ತಿತ್ತು’’ ಎಂದು ಹಿರಿಯ ವೈದ್ಯ ಅನಾತೊಲಿ ಕಲಿನಿಚೆಂಕೊ ಹೇಳಿದರು.

ನವಾಲ್ನಿಗೆ ಚಿಕಿತ್ಸೆ ನೀಡುತ್ತಿರುವಾಗ ರಶ್ಯದ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪಗಳನ್ನು ಅವರು ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News