×
Ad

ಸೋದರಮಾವನ ಸ್ಥಾನದಲ್ಲಿ ನಿಂತು ಗೌರಿ- ಸಾವರಿಯ ವಿವಾಹ ನೆರವೇರಿಸಿದ ಬಾಬಾ ಭಾಯ್ ಪಠಾಣ್

Update: 2020-08-25 12:55 IST

ಮುಂಬೈ, ಆ.25: ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ರಾಖಿ ಸಹೋದರಿಯ ಇಬ್ಬರು ಪುತ್ರಿಯರ ವಿವಾಹವನ್ನು ನೆರವೇರಿಸಿಕೊಟ್ಟ ಸೌಹಾರ್ದದ ಪ್ರಸಂಗ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದೆ.

ಅಹ್ಮದ್‌ ನಗರ ಜಿಲ್ಲೆಯ ಬೋಧೆಗಾಂವ್ ಗ್ರಾಮದ ಬಾಬಾ ಭಾಯ್ ಪಠಾಣ್ ಎಂಬವರು ಗೌರಿ ಹಾಗೂ ಸಾವರಿ ಎಂಬ ಇಬ್ಬರು ಸಹೋದರಿಯರ ವಿವಾಹ ನಡೆಸಲು ನೆರವಾದರು. ಈ ಯುವತಿಯರ ತಾಯಿ ಸವಿತಾ ಭೂಸರೆ ಹಲವು ವರ್ಷಗಳಿಂದ ಪಠಾಣ್ ಅವರಿಗೆ ರಾಖಿ ಕಟ್ಟುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಸವಿತಾ ಅವರ ಪತಿಯು ಪತ್ನಿ ಹಾಗೂ ಮಕ್ಕಳನ್ನು ತ್ಯಜಿಸಿದ್ದ. ಗೌರಿ ಹಾಗೂ ಸಾವರಿ ವಿವಾಹ ಸಂದರ್ಭದಲ್ಲಿ ಪಠಾಣ್ ಸೋದರ ಮಾವನ ಸ್ಥಾನದಲ್ಲಿ ನಿಂತು ವಿವಾಹ ಮಾಡಿಸಿದರು. ತಮ್ಮ ಉಳಿತಾಯವನ್ನು ಈ ಇಬ್ಬರು ಹೆಣ್ಣುಮಕ್ಕಳ ವಿವಾಹಕ್ಕಾಗಿ ವೆಚ್ಚ ಮಾಡಿದ ಪಠಾಣ್, ಹಿಂದೂ ಸಂಪ್ರದಾಯಕ್ಕೆ ಅನುಸಾರವಾಗಿ ಸೋದರಮಾವನ ಸ್ಥಾನದಲ್ಲಿ ನಿಂತು ವಿಧಿವಿಧಾನಗಳನ್ನು ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News