ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಪೊಸ್ಕೋ ಪ್ರಕರಣ ದಾಖಲು

Update: 2020-08-25 12:28 GMT

ಹಿರಿಯಡ್ಕ, ಆ.25: ದಲಿತ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪೊಸ್ಕೋ ಪ್ರಕರಣ ದಾಖಲಾಗಿದೆ

ಆ.24ರಂದು ಮಧ್ಯಾಹ್ನ ವೇಳೆ 13ವರ್ಷ ಪ್ರಾಯದ ಬಾಲಕಿ ಮನೆಯಲ್ಲಿ ರುವಾಗ ಅಲ್ಲೇ ಸಮೀಪ ರಸ್ತೆ ಕಾಮಗಾರಿ ನಡೆಸುತ್ತಿದ್ದ ಆರೋಪಿ ಪ್ರದೀಪ್ ಶೆಟ್ಟಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ. ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ನೊಂದ ಮಗುವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಮತಾ ಸೈನಿಕ ದಳ ಗ್ರಾಮ ಶಾಖೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಕುರಿತು ಹಿರಿಯಡ್ಕ ಠಾಣೆಯಲ್ಲಿ ದೂರು ಸಲ್ಲಿಸಲು ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News