×
Ad

ನೆರೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟ ಕುಟಂಬಕ್ಕೆ ಪರಿಹಾರ ವಿತರಣೆ

Update: 2020-08-25 18:00 IST

ಉಡುಪಿ, ಆ.25: ಇತ್ತೀಚೆಗೆ ನೆರೆಯ ನೀರಿಗೆ ಕೊಚ್ಚಿ ಹೋಗಿ ಮೃತಪಟ್ಟ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ಸುಧಾಮ ಪೂಜಾರಿ ಕುಟುಂಬಕ್ಕೆ ಪ್ರಾಕೃತಿಕ ಪರಿಹಾರ ನಿಧಿಯಿಂದ 5 ಲಕ್ಷ ರೂ. ಚೆಕ್‌ನ್ನು ಇಂದು ಹಸ್ತಾಂತರಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮೃತರ ಮನೆಗೆ ಭೇಟಿ ನೀಡಿ ಮೃತ ಸುಧಾಮ ಪೂಜಾರಿ ಅವರ ಕುಟುಂಬದವರಿಗೆ ಪರಿಹಾರ ಧನದ ಚೆಕ್ ವಿತರಿಸಿ ದರು. ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಶು ಕುಮಾರ್ ಕಲ್ಯಾಣಪುರ, ಕಲ್ಯಾಣಪುರ ಗ್ರಾಪಂ ಮಾಜಿ ಸದಸ್ಯರಾದ ಸತೀಶ್, ನವೀನ್, ಅಪ್ಪುಜತ್ತನ್, ಉಮೇಶ್, ಪಕ್ಷದ ಕಾರ್ಯಕರ್ತರಾದ ಸುರೇಶ್, ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಕಂದಾಯ ನಿರೀಕ್ಷಕ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News