ದ.ಕ. ಜಿಲ್ಲೆ : 247 ಮಂದಿಯಲ್ಲಿ ಕೊರೋನ ಪಾಸಿಟಿವ್ ಪತ್ತೆ; 3 ಮಂದಿ ಬಲಿ
ಮಂಗಳೂರು, ಆ. 25: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಕೊರೋನ ಸೋಂಕಿನ 247 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅಲ್ಲದೆ 3 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯದವರ ಸಂಖ್ಯೆ 319ಕ್ಕೇರಿದೆ.
ಮಂಗಳೂರು, ಪುತ್ತೂರು ಮತ್ತು ಹೊರ ಜಿಲ್ಲೆಯ ತಲಾ ಒಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದರೆ, ಮಂಗಳೂರಿನ 171, ಬಂಟ್ವಾಳದ 48, ಪುತ್ತೂರಿನ 6, ಸುಳ್ಯದ 4, ಬೆಳ್ತಂಗಡಿಯ 10 ಮತ್ತು ಇತರ ಜಿಲ್ಲೆಯ 8 ಮಂದಿಗೆ ಸೋಂಕು ತಗುಲುವುದೊಂದಿಗೆ ಮಂಗಳವಾರ 247 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.
ಈವರೆಗೆ ದ.ಕ.ಜಿಲ್ಲೆಯ 85,881 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 10,778 ಮಂದಿಯ ವರದಿ ಪಾಸಿಟಿವ್ ಬಂದಿದ್ದರೆ, 75,103 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‌ನಿಂದ 2, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 180, ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ಮಂದಿಯ ಸಹಿತ ಮಂಗಳವಾರ 218 ಮಂದಿ ಗುಣಮುಖರಾಗಿ ಕೊರೋನ ಸೋಂಕಿನಿಂದ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 8136ಕ್ಕೇರಿದೆ. ಜಿಲ್ಲೆಯಲ್ಲಿ 2323 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.