×
Ad

ಆವಿಷ್ಕಾರ್ ಪಾಜೆಕ್ಟ್ ಪ್ರದರ್ಶನ: ಬಂಟಕಲ್ಲು ವಿದ್ಯಾರ್ಥಿಗಳ ಪಾಜೆಕ್ಟ್‌ಗೆ ದ್ವಿತೀಯ ಬಹುಮಾನ

Update: 2020-08-25 20:15 IST

ಉಡುಪಿ, ಆ.25: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾ ಲಯ ಆಯೋಜಿಸಿದ್ದ ಆವಿಷ್ಕಾರ್ ಪಾಜೆಕ್ಟ್ ಪ್ರದರ್ಶನದಲ್ಲಿ ಬಂಟಕಲ್ ಮಧ್ವವಾದಿರಾಜ ತಾಂತ್ರಿಕ ವಿದ್ಯಾಲಯದ ಸಿವಿಲ್ ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ‘ಸಿಂಥೆಸಿಸ್ ಆಫ್ ನ್ಯಾನೋ ಪಾರ್ಟಿಕಲ್ಸ್ ಯೂಸಿಂಗ್ ಮೆಡಿಸಿನಲ್ ಹರ್ಬ್ಸ್ ಆ್ಯಂಡ್ ಯುಟಿಲೈಸೇಶನ್ ಇನ್ ವಾಟರ್ ಟ್ರೀಟ್‌ಮೆಂಟ್’ ಎಂಬ ಪ್ರಾಜೆಕ್ಟ್‌ಗೆ ದ್ವಿತೀಯ ಬಹುಮಾನ ದೊರೆತಿದೆ.

ಆ.19ರಂದು ನಡೆದ ಆನ್‌ಲೈನ್ ‘ಆವಿಷ್ಕಾರ್ ಸಮ್ಮಿಟ್ -2020’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಶೆಟ್ಟಿ ಪವನ್ ಆನಂದ್, ಶಿಲ್ಪಾಎಸ್. ಆಚಾರ್ಯ, ಶೀತಲ್ ಬಿ.ಆರ್., ಶ್ರೇಯಾ ದ್ವಿತೀಯ ಸ್ಥಾನಿಗಳೆಂದು ಘೋಷಿಸಲಾಯಿತು. ಈ ಪ್ರಾಜೆಕ್ಟ್‌ಗೆ ವಿದ್ಯಾಸಂಸ್ಥೆಯ ಡಾ.ಕೆ.ಕೆ. ಶ್ರೀನಿವಾಸನ್ ಮತ್ತು ರೋಹಿತ್ ಪ್ರಕಾಶ್ ವೇಗಸ್ ಮಾರ್ಗದರ್ಶನ ನೀಡಿದ್ದರು.

ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸತುವಿನ ಪಾರ್ಟಿಕಲ್ಸ್‌ಗಳನ್ನು ಸಂಶ್ಲೇಷಿಸುವುದು ಮತ್ತು ಅವುಗಳನ್ನು ನೀರಿನ ಸಂಸ್ಕರಣೆಗೆ ಬಳಸು ವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸತುವಿನ ನ್ಯಾನೋ ಪಾರ್ಟಿಕಲ್ಸ್ ಸಂಶ್ಲೇಷಣೆಗೆ ರಾಸಾಯನಿಕಗಳನ್ನು ಬಳಸುವ ಬದಲು ಸ್ಥಳೀಯವಾಗಿ ಲಭ್ಯ ವಿರುವ ಗಿಡಮೂಲಿಕೆ ತುಳಸಿ ಸಸ್ಯದ ಸಾರವನ್ನು ಬೇಸ್‌ನಂತೆ ಬಳಸಲಾಗುತ್ತದೆ. ಇದು ನೀರಿನ ಶುದ್ಧೀಕರಣ ತಂತ್ರಜ್ಞಾನಗಳನ್ನು, ಅತ್ಯಂತ ಕಡಿಮೆ ಲಾಭಂಶ ದೊಂದಿಗೆ, ಸಮಾಜದ ಬಡವರ್ಗಗಳಿಗೆ ಲಭಿಸುವ ಹಾದಿಯನ್ನು ಸುಗಮ ಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News