×
Ad

ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ್ಯ ತರಬೇತಿಗೆ ಪ್ರಾಮುಖ್ಯತೆ

Update: 2020-08-25 20:18 IST

ಮಣಿಪಾಲ, ಆ.25: ಬೆಂಗಳೂರಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಆರು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಸೋಮವಾರ ಶಿವಳ್ಳಿ ಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಪ್ರಾರಂಗೊಂಡಿತು.

ತರಬೇತಿಯನ್ನು ಮಂಗಳೂರಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ನಾವು ಕೇವಲ ಕೌಶಲ್ಯ ಪದವಿ ಪಡಕೊಂಡರೆ ಸಾಲದು, ಜೊತೆಗೆ ಯಾವುದಾದರೊಂದು ಉದ್ಯೋಗಕ್ಕೆ ಬೇಕಾದ ಕೌಶಲ್ಯದ ತರಬೇತಿ ಕೂಡಾ ಪಡೆದು ಕೊಳ್ಳುವುದು ಅಗತ್ಯ. ಇದೀಗ ಬರುವ ಹೊಸ ಶಿಕ್ಷಣ ನೀತಿಯಲ್ಲಿ ಇದಕ್ಕೆ ಸಾಕಷ್ಟು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಪ್ರತಿಯೊಬ್ಬರು ಸರಕಾರಿ ಉದ್ಯೋಗವನ್ನು ನಂಬಿಕೊಂಡಿರುವ ಬದಲು ಸ್ವಂತ ಉದ್ಯೋಗದ ಕಡೆಗೆ ವಿಶೇಷ ಆಸಕ್ತಿಯನ್ನು ಬೆಳಸಿಕೊಳ್ಳಬೇಕು. ಆಗ ನೀವು ಇತರರಿಗೂ ಉದ್ಯೋಗ ನೀಡುವ ಅವಕಾಶ ಸಿಗುತ್ತದೆ. ಇದಕ್ಕಾಗಿ ಸರಕಾರ ಸ್ವಂತ ಉದ್ಯೋಗಕ್ಕಾಗಿ ವಿವಿಧ ಇಲಾಖೆಗಳಿಂದ ಸಾಲ ಸೌಲಭ್ಯದೊಂದಿಗೆ ತರಬೇತಿಯನ್ನು ನೀಡುತ್ತಿದೆ ಎಂದವರು ಹೇಳಿದರು.

ಅತಿಥಿಗಳಾಗಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಉಡುಪಿಯ ಡಿಎಸ್‌ಡಿಓ ಭಾಸ್ಕರ ಅಮೀನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವಲಯಾಧಿ ಕಾರಿ ರಾಘವೇಂದ್ರ ಎಮ್., ಸಿಡಾಕ್ ಉಡುಪಿಯ ಕೇಂದ್ರ ವ್ಯವಸ್ಥಾಪಕ ಪ್ರಥ್ವಿರಾಜ ನಾಯಕ್, ಯು.ಎನ್.ಡಿ.ಪಿ ಜಿಲ್ಲಾ ಸಂಯೋಜಕ ಮಂಗಳೂರು ಉಮೇಶ ಹಾಗೂ ಬಿವಿಟಿ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಸಿಡಾಕ್‌ನ ಜಂಟಿ ನಿರ್ದೇಶಕ ಅರವಿಂದ ಡಿ.ಬಾಳೇರಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸಿಡಾಕ್‌ನ ತರಬೇತು ದಾರ ಸತೀಶ್ ಮಾಬೆನ್ ಸ್ವಾಗತಿಸಿದರು. ಬಿವಿಟಿಯ ಹಿರಿಯ ಸಲಹೆಗಾರ ಬಾಲಸುಬ್ರಹ್ಮಣ್ಯ ಎಸ್ ವಂದಿಸಿದರು. ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ. ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News