×
Ad

ಜನರ ಆರೋಗ್ಯ ರಕ್ಷಣೆ ಕಾಂಗ್ರೆಸ್ ಪಕ್ಷದ ಗುರಿ: ಸೊರಕೆ

Update: 2020-08-25 20:21 IST

ಉಡುಪಿ, ಆ.25: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಆರೋಗ್ಯ ಹಸ್ತ ಯೋಜನೆಯನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೊರಕೆ, ಜನರ ಆರೋಗ್ಯವನ್ನು ನೋಡಿ ಕೊಳ್ಳುವ ದೃಷ್ಟಿಯಿಂದ ಕೋವಿಡ್-19ರ ಹಾವಳಿ ಮಧ್ಯೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದಂತೆ ಆರೋಗ್ಯ ಹಸ್ತ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದರು. ಇದರಲ್ಲಿ ಮನೆ ಮನೆಗೆ ಅಧಿಕೃತ ಜನರು ಭೇಟಿ ನೀಡಿ ಜನರ ಆರೋಗ್ಯ ಯೋಗಕ್ಷೇಮ ವಿಚಾರಿಸಿ, ಜನರ ಅಪೇಕ್ಷೆಯಂತೆ ಕ್ರಮ ಕೈಗೊಳ್ಳುವರು ಎಂದು ವಿವರಿಸಿದರುಳ್ಳುವುದರ ಅಗತ್ಯದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಪಕ್ಷದ ಆದೇಶದಂತೆ ಅರೋಗ್ಯ ಹಸ್ತ ಯೋಜನೆ ಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಜಿಲ್ಲೆಯಲ್ಲಿ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕುಂದಾಪುರ ಬ್ಲಾಕ್, ಪ್ರದೀಪ್ ಕುಮಾರ್ ಶೆಟ್ಟಿ ವಂಡ್ಸೆ ಬ್ಲಾಕ್, ಶೇಖರ್ ಮಡಿವಾಳ ಕಾರ್ಕಳ ಬ್ಲಾಕ್, ಮಂಜುನಾಥ ಪೂಜಾರಿ ಹೆಬ್ರಿ ಬ್ಲಾಕ್, ಎಸ್.ಮದನ್ ಕುಮಾರ್ ಬೈಂದೂರು ಬ್ಲಾಕ್ ಇವರು ಉಪಸ್ಥಿತರಿದ್ದು ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು.

ಜಿಲ್ಲಾ ಉಸ್ತುವಾರಿಗಳಾದ ದೇವಾನಂದ ಶೆಟ್ಟಿ, ರಮೇಶ್ ಶೆಟ್ಟಿ ಹಾವಂಜೆ, ನೀರೆ ಕೃಷ್ಣ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಣ್ಣಯ್ಯ ಶೇರಿಗಾರ್, ವೈ.ಸುಕುಮಾರ್, ಕುಶಲ್ ಶೆಟ್ಟಿ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದೇವಕಿ ಸಣ್ಣಯ್ಯ, ಸುಧಾಕರ ಕೋಟ್ಯಾನ್, ಕೀರ್ತಿಶೆಟ್ಟಿ, ಬಾಲಕೃಷ್ಣ ಪೂಜಾರಿ, ವಕ್ತಾರ ಭಾಸ್ಕರ್‌ರಾವ್ ಕಿದಿಯೂರು, ಡಾ.ಹರೀಶ್ ಕುಮಾರ್, ಡಾ. ಸಂದೀಪ್ ಸನಿಲ್, ಡಾ. ಸುನೀತಾ ಶೆಟ್ಟಿ, ಪ್ರಶಾಂತ್ ಜತ್ತನ್ನ, ಜನಾರ್ದನ ಭಂಡಾರ್ಕಾರ್, ಶೇಖರ್ ಪೂಜಾರಿ, ನಾರಾಯಣ ಕುಂದರ್ ಭಾಗವಹಿಸಿದ್ದರು.

ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೆ.ಅಣ್ಣಯ್ಯ ಶೇರಿಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News