ಹಾಲು ಉತ್ಪಾದಕರಿಗೆ ಪೋತ್ಸಾಹಧನ ಬಿಡುಗಡೆ
Update: 2020-08-25 20:23 IST
ಮಂಗಳೂರು, ಆ.25: ರಾಜ್ಯ ಸರಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದ ವಿವರಗಳನ್ನು ಡಿಬಿಟಿ ಕ್ಷೀರಸಿರಿ ತಂತ್ರಾಂಶದಲ್ಲಿ ಅಳವಡಿಸಿ ನೇರವಾಗಿ ಖಜಾನೆ-2ರಿಂದ ಪಾವತಿಸುವ ಪದ್ಧತಿಯನ್ನು ಅನುಸರಿಸುತ್ತಿದೆ. ಅದರಂತೆ ಎಪ್ರಿಲ್ ಮತ್ತು ಮೇ ತಿಂಗಳ 5 ರೂ. ಪ್ರೋತ್ಸಾಹ ಧನವನ್ನು ಸದಸ್ಯರ ಬ್ಯಾಂಕ್ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ. ಎಂದು ದ.ಕ.ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಸಂಘಗಳಿಗೆ ಪೂರೈಕೆ ಮಾಡಲಾದ ಸದಸ್ಯರ ಹಾಲಿನ ವಿವರಗಳನ್ನು ಈಗಾಗಲೇ ಕ್ಷೀರಸಿರಿ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಸದ್ಯದಲ್ಲಿಯೇ ಹೈನುಗಾರರ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.