×
Ad

ಉರ್ವಸ್ಟೋರ್‌ನಲ್ಲಿ ಸಿಪಿಎಂ ಧರಣಿ

Update: 2020-08-25 20:28 IST

ಮಂಗಳೂರು, ಆ.25: ಭಯ ಬೇಡ, ಜಾಗೃತಿ ಇರಲಿ ಎಂದು ಅಬ್ಬರಿಸುವ ಕೇಂದ್ರ ಸರಕಾರವು ವಾಸ್ತವದಲ್ಲಿ ಮಾಧ್ಯಮಗಳ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿತು. ಧೈರ್ಯ ತುಂಬುವ ಮೂಲಕ ಜನತೆಗೆ ಸ್ಪಂದಿಸಬೇಕಾದ ಕೇಂದ್ರ ಸರಕಾರವು ಜನರಲ್ಲಿ ಮೌಢ್ಯವನ್ನು ತುಂಬಿಸಿ ದಾರಿ ತಪ್ಪಿಸಲು ಹವಣಿಸಿತು. ಚಪ್ಪಾಳೆ ತಟ್ಟಿರಿ, ಜಾಗಟೆ ಬಡಿಯಿರಿ, ಗೋಮೂತ್ರ ಕುಡಿಯಿರಿ, ಕೆಸರಲ್ಲಿ ಸ್ನಾನ ಮಾಡಿರಿ ಎಂಬ ಅಸಂಬದ್ಧ ಹೇಳಿಕೆಗಳನ್ನು ಬಿಜೆಪಿ ಸಚಿವರು, ಸಂಸದರು, ಶಾಸಕರು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸಿದರು ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಸಿಪಿಎಂ ವತಿಯಿಂದ ನಗರದ ಉರ್ವಸ್ಟೋರ್‌ನಲ್ಲಿ ಮಂಗಳವಾರ ನಡೆದ ಧರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿಪಿಎಂ ನಾಯಕರಾದ ಮನೋಜ್ ಕುಲಾಲ್, ಕಿಶೋರ್, ರಾಜೇಶ್ ಕುಲಾಲ್, ರಘುವೀರ್, ಡಿವೈಎಫ್‌ಐ ನಾಯಕರಾದ ಪ್ರಶಾಂತ್ ಎಂ.ಬಿ., ನಾಗೇಂದ್ರ, ಸನತ್, ಸುಕೇಶ್, ಇಕ್ಬಾಲ್, ಸಿಐಟಿಯು ನಾಯಕರಾದ ಶ್ಯಾಮುವೆಲ್ ಟೈಟಸ್, ದಿನೇಶ್ ಶ್ರೀಯಾನ್, ಹರಿಣಾಕ್ಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News