ಕಿನ್ಯ: ವಿದ್ಯಾರ್ಥಿಗಳಿಗೆ ಸನ್ಮಾನ
Update: 2020-08-25 20:30 IST
ಮಂಗಳೂರು, ಆ.25: ಕಿನ್ಯ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಮಾರ್ಗದರ್ಶನ ಶಿಬಿರ ಮತ್ತು ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಅಲ್ ಅಮೀನ್ ಕಚೇರಿಯಲ್ಲಿ ನಡೆಯಿತು.
ಸಮಾಜ ಸೇವಕ ರಫೀಕ್ ಮಾಸ್ಟರ್ ಶೈಕ್ಷಣಿಕ ಮಾರ್ಗದರ್ಶನ ತರಗತಿ ನಡೆಸಿದರು. ಅಲ್ ಅಮೀನ್ ಸದಸ್ಯ ಸಮೀರ್ ಎಚ್‌ಎಂ ನಗರ ಕಿರಾಅತ್ ಪಠಿಸಿದರು. ಶೇಕ್ ಇಬ್ರಾಹೀಂ ಮಜಲ್ ಸ್ವಾಗತಿಸಿದರು. ಅಶ್ರಫ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು. ಯೂಸುಫ್ ಮಜಲ್ ವಂದಿಸಿದರು.