ಯುಎಇಗೆ ತೆರಳುವವರಿಗೆ ಕೋವಿಡ್ ನೆಗೆಟಿವ್ ವರದಿ ಅಗತ್ಯ: ಏರ್ ಇಂಡಿಯಾ ಎಕ್ಸ್‌ಪ್ರೆಸ್

Update: 2020-08-25 15:34 GMT

ಹೊಸದಿಲ್ಲಿ, ಆ. 25: ಯುಎಇಗೆ ಪ್ರಯಾಣಿಸುವ 12 ಹಾಗೂ ಅದಕ್ಕಿಂತ ಮೇಲಿನ ವಯಸ್ಸಿನ ಪ್ರಯಾಣಿಕರಿಗೆ ನೂತನ ಮಾರ್ಗದರ್ಶಿ ಸೂತ್ರಗಳನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳವಾರ ಬಿಡುಗಡೆ ಮಾಡಿದೆ.

ಈ ಮಾರ್ಗದರ್ಶಿ ಸೂತ್ರದಂತೆ 12 ಹಾಗೂ ಅದಕ್ಕಿಂತ ಮೇಲಿನ ವಯಸ್ಸಿನ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವ ಮೊದಲು ತಮ್ಮ ಕೊರೋನ ನೆಗೆಟಿವ್ ವರದಿಯನ್ನು ವಿಮಾನ ಯಾನ ಸಂಸ್ಥೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಈ ಪ್ರಯಾಣಿಕರು ಇಲ್ಲಿಂದ ನಿರ್ಗಮಿಸುವ 96 ಗಂಟೆಗಿಂತ ಮುನ್ನ ಕೊರೋನ ಪರೀಕ್ಷೆ ಮಾಡಿಕೊಳ್ಳಬೇಕು ಅಲ್ಲದೆ, ಕೊರೋನ ನೆಗೆಟಿವ್ ವರದಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ವೆಬ್‌ಸೈಟ್ https://screening.purehealth.ae ಗೆ ಅಪ್‌ಲೋಡ್ ಮಾಡಬೇಕು ಎಂದು ಅದು ಹೇಳಿದೆ.

ದೇಶಕ್ಕೆ ಆಗಮಿಸುವ ಪ್ರಯಾಣಿಕರಿಗೆ ಪ್ರಸ್ತುತ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ. ಆದರೆ, 96 ಗಂಟೆ ಒಳಗೆ ಕೊರೋನ ನೆಗೆಟಿವ್ ಪ್ರಮಾಣಪತ್ರ ಸಲ್ಲಿಸಿದವರಿಗೆ ಇದು ಕಡ್ಡಾಯವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News