ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆಯ ಸಂಶೋಧನೆ ಈ ವರ್ಷ ಸಂಪೂರ್ಣ?

Update: 2020-08-25 16:12 GMT

ಲಂಡನ್, ಆ. 25: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆ್ಯಸ್ಟ್ರಾಝೆನೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯು ಈಗ ಪ್ರಾಯೋಗಿಕ ಹಂತದಲ್ಲಿದ್ದು, ಸಾಕಷ್ಟು ದತ್ತಾಂಶಗಳನ್ನು ಸಂಗ್ರಹಿಸಲು ಸಂಶೋಧಕರಿಗೆ ಸಾಧ್ಯವಾದರೆ, ಈ ವರ್ಷ ಲಸಿಕೆಯು ಅನುಮೋದನೆಗಾಗಿ ನಿಯಂತ್ರಣ ಪ್ರಾಧಿಕಾರದ ಮುಂದೆ ಹೋಗಬಹುದಾಗಿದೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್‌ನ ನಿರ್ದೇಶಕ ಆ್ಯಂಡ್ರೂ ಪೊಲಾರ್ಡ್ ಮಂಗಳವಾರ ಬಿಬಿಸಿ ರೇಡಿಯೊಗೆ ತಿಳಿಸಿದ್ದಾರೆ.

 ‘‘ಕ್ಲಿನಿಕಲ್ ಪರೀಕ್ಷೆಗಳಲ್ಲಿ ಗಣನೀಯ ಫಲಿತಾಂಶ ಕಂಡುಬಂದರೆ ನಾವು ಅದನ್ನು ಈ ವರ್ಷ ನಿಯಂತ್ರಣ ಪ್ರಾಧಿಕಾರದ ಮುಂದೆ ಇಡಬಹುದಾಗಿದೆ. ಬಳಿಕ, ನಾವು ಸಲ್ಲಿಸಿದ ದತ್ತಾಂಶಗಳ ಸಂಪೂರ್ಣ ವಿಶ್ಲೇಷಣೆಯ ಪ್ರಕ್ರಿಯೆಯನ್ನು ಅವರು ಕೈಗೆತ್ತಿಕೊಳ್ಳುತ್ತಾರೆ’’ ಎಂದು ಪೊಲಾರ್ಡ್ ಹೇಳಿದರು.

ಆಕ್ಸ್‌ಫರ್ಡ್ ಲಸಿಕೆಯು ಮೊದಲ ಮಾನವ ಪರೀಕ್ಷೆಯಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸುವ ಮೂಲಕ ಆರಂಭಿಕ ಭರವಸೆಯನ್ನು ಮೂಡಿಸಿದೆ. ಆ ಮೂಲಕ ಮಾನವ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿದ ಸಾಂಕ್ರಾಮಿಕ ಕಾಯಿಲೆಯೊಂದಕ್ಕೆ ಲಸಿಕೆಯನ್ನು ಕಂಡುಹಿಡಿಯುವ ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News