ಚೈನೀಸ್ ಮೊಬೈಲ್, ಆನ್ಲೈನ್ ಕಂಪೆನಿಯಿಂದ ಅನ್ಯಾಯದ ಆರೋಪ: ಹೋರಾಟ ನಡೆಸಲು ಚಿಂತನಾ ಸಭೆ
ಉಡುಪಿ : ಚೈನೀಸ್ ಮೊಬೈಲ್ ಕಂಪೆನಿ ಮತ್ತು ಆನ್ಲೈನ್ ಕಂಪೆನಿಗಳು ಒಟ್ಟು ಸೇರಿ ಮಾಡುತ್ತಿರುವ ಅನ್ಯಾಯ, ಬೇದಭಾವ ಮತ್ತು ಭ್ರಷ್ಟಾ ಚಾರದ ವಿರುದ್ಧ ರಾಷ್ತ್ರ ವ್ಯಾಪಿ ಟ್ವೀಟ್ ಮಾಡಿ ಜನಾಭಿಪ್ರಾಯ ಮೂಡಿಸಿ, ಹೋರಾಟ ನಡೆಸಲು ಚಿಂತನಾ ಸಭೆಯು ಮಂಗಳವಾರ ಉಡುಪಿಯ ಮಣಿಪಾಲ ಇನ್ ಹೋಟೆಲ್ ನಲ್ಲಿ ನಡೆಯಿತು.
ಚೈನೀಸ್ ಮೊಬೈಲ್ ಕಂಪೆನಿಗಳು ಆನ್ಲೈನ್ ಮತ್ತು ರಿಟೈಲರ್ಸ್ ಗಳ ಮಧ್ಯ ಮಾಡುತ್ತಿರುವ ತಾರತಮ್ಯ ನಿಲ್ಲಿಸಲು, ಒಂದೇ ರೀತಿ ಯ ದರ ನಿಗದಿ, ಹಂಚಿಕೆ ಹಾಗು ಒಂದೇ ಸಮಯಕ್ಕೆ ಬಿಡುಗಡೆಯಾಗಬೇಕೆಂದು ಆಗ್ರಹಿಸಿ ನಾವು ನ್ಯಾಯಯುತವಾದ ಹೋರಾಟ ನಡೆಸಬೇಕು ಎಂದು ದ ಕ ಜಿಲ್ಲೆ ಹಾಗು ಉಡುಪಿ ಜಿಲ್ಲಾ ಮೊಬೈಲ್ ರೆಟೈಲರ್ಸ್ ಸಂಘಟನೆಯ ಕಾರ್ಯದರ್ಶಿ ಮುನೀರ್ ಹೇಳಿದರು.
ಕೆಲವೇ ಕೆಲವು ವರುಷಗಳಿಂದೀಚೆಗೆ ಅಲ್ಲಲ್ಲಿ ತಲೆಎತ್ತಿದ ಆನ್ಲೈನ್ ಕಂಪೆನಿಗಳು ಇಂದು ಬಹಳ ವರುಷಗಳಿಂದ ಮೊಬೈಲ್ ವ್ಯಾಪಾರ ಮಾಡುತ್ತಾ ಬಂದಿರುವ ನಮ್ಮಂತಹ ಸ್ಥಳೀಯ ವ್ಯಾಪಾರಿಗಳ ವ್ಯಾಪಾರವನ್ನು ಕಸಿದುಕೊಳ್ಳುವ ಕೃತ್ಯಕ್ಕೆ ಕೈ ಹಾಕುತ್ತಿವೆ. ಇದಕ್ಕೆ ಎಲ್ಲ ಚೈನೀಸ್ ಮೊಬೈಲ್ ಕಂಪೆನಿಗಳು ಕೂಡ ಸಾಥ್ ನೀಡುತ್ತಾ ಇವೆ. ಇದು ಹೀಗೆ ಮುಂದುವರಿದರೆ ನಮ್ಮ ವ್ಯಾಪಾರ ಅವನತಿ ಯತ್ತ ಸಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಇದರಿಂದ ಮೊಬೈಲ್ ವ್ಯವಹಾರ ಮಾಡುತ್ತಿರುವ ಮತ್ತು ಅದನ್ನು ಅವಲಂಬಿ ಸಿರುವ ಡಿಸ್ಟ್ರಿಬ್ಯೂಟರ್, ರಿಟೆಲರ್ಸ್, ಸೇಲ್ಸ್ ಎಕ್ಸಿಕ್ಯೂ ಟಿವ್, ಸೇಲ್ಸ್ ಪ್ರಮೋಟರ್ಸ್ ಮತ್ತು ಅವರನ್ನು ಅವಲಂಬಿತವಾದ ಅವರ ಕುಟುಂಬದವರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಈ ಆನ್ಲೈನ್ ಕಂಪೆನಿಗಳು ಮತ್ತು ಮೊಬೈಲ್ ಕಂಪೆನಿಗಳಿಂದ ನಮಗೆ ನ್ಯಾಯ ಸಿಗ ಬೇಕಾದರೆ ಪ್ರತಿಯೊಬ್ಬ ಮೊಬೈಲ್ ವ್ಯಾಪಾರಸ್ಥರು ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ (ಎಐ ಎಮ್ ಆರ್ ಎ) ದೊಂದಿಗೆ ಕೈಜೋಡಿಸಬೇಕು.
ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ ನಿರಂತರ ಟ್ವೀಟ್ ಮಾಡಿ ಜನಾಭಿಪ್ರಾಯ ಮೂಡಿಸಿ, ನಮ್ಮ ನ್ಯಾಯವಾದ ಬೇಡಿಕೆಯನ್ನು ಸರಕಾರಕ್ಕೆ ಮುಟ್ಟುವಂತೆ ಮಾಡಬೇಕಾಗಿದೆ. ಈ ಮೂಲಕ ಎಐ ಎಮ್ ಆರ್ ಎ ವನ್ನು ಬಲಿಷ್ಠ ಗೊಳಿಸಬೇಕು. ಸ್ಥಳೀಯ ವ್ಯಾಪಾರಿಗಳು ಆತ್ಮ ನಿರ್ಭರವಾದರೆ ಮಾತ್ರ ಉದ್ಯೋಗ, ಟ್ಯಾಕ್ಸ್ ಸಂಗ್ರಹ, ಉತ್ಸವ ಮತ್ತು ಇತರ ಸರ್ವಾಂಗಿಣ ಅಭಿ ವೃದ್ಧಿ ಹೊಂದಲು ಸಾಧ್ಯ. ಮೊಬೈಲ್ ಉದ್ಯೋ ದಲ್ಲಿ ಹೆಚ್ಚಾಗಿ ಯುವ ಜನರು ಜಾಸ್ತಿಯಾಗಿದ್ದು ಸರಕಾರದಿಂದ ಯಾವುದೇ ಸೌಲಭ್ಯ ತೆಗೆದುಕೊಳ್ಳದೆ ಸ್ವಂತ ಉದ್ಯೋಗ ಸೃಷ್ಟಿ ಮಾಡಿಕೊಂಡು, ಅನೇಕರಿಗೆ ಉದ್ಯೋಗವನ್ನು ಕೊಟ್ಟು ದೇಶದ ಪ್ರಗತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಸರಕಾರವು ಈ ಕೂಡಲೇ ಎಚ್ಚೆತ್ತು ಕೊಂಡು ಸ್ಥಳೀಯ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಪರಿಹರಿಸಬೇಕಾಗಿ ನಾವು ಆಗ್ರಹಿಸುತ್ತೇವೆ ಎಂದರು.
ಎಐ ಎಮ್ ಆರ್ ಎ ಉಡುಪಿ ಜಿಲ್ಲಾ ಅಧ್ಯಕ್ಷ ಸುಹಾಸ್ ಕಿಣಿ ಪ್ರಾಸ್ತಾವಿಕ ಮಾತನಾಡಿದರು.
ಎಐ ಎಮ್ ಆರ್ ಎ ದ ಕ ಜಿಲ್ಲೆ ಹಾಗು ಉಡುಪಿ ಜಿಲ್ಲಾ ಅಧ್ಯಕ್ಷ ಸಲೀಂ, ಸದಸ್ಯರಾದ ಅಝಾದ್, ರಿಯಾಝ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿವೇಕ್ ಸುವರ್ಣ ಸ್ವಾಗತಿಸಿ, ವಂದಿಸಿದರು.