ಪಾಕಿಸ್ತಾನಕ್ಕಾಗಿ ನಿರ್ಮಿಸಿದ ಮೊದಲ ಯುದ್ಧನೌಕೆಯನ್ನು ಪ್ರದರ್ಶಿಸಿದ ಚೀನಾ

Update: 2020-08-25 17:50 GMT

 ಇಸ್ಲಾಮಾಬಾದ್, ಆ. 25: ಪಾಕಿಸ್ತಾನಕ್ಕಾಗಿ ನಿರ್ಮಿಸುತ್ತಿರುವ ನಾಲ್ಕು ಸುಧಾರಿತ ಯುದ್ಧನೌಕೆಗಳ ಪೈಕಿ ಮೊದಲನೆಯದನ್ನು ಚೀನಾ ರವಿವಾರ ಪ್ರದರ್ಶಿಸಿದೆ. ಶಾಂೈಯ ಹುಡೊಂಗ್ ರೊಂಗುವ ಶಿಪ್‌ಯಾರ್ಡ್‌ನಲ್ಲಿ ಮೊದಲ ಯುದ್ಧನೌಕೆ ಪ್ರದರ್ಶನದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 ಇತ್ತೀಚಿನ ಮೇಲ್ಮೈ ನಿಗ್ರಹ ಮತ್ತು ಆಕಾಶ ನಿಗ್ರಹ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಯುದ್ಧ ನಿರ್ವಹಣೆ ವ್ಯವಸ್ಥೆ ಮತ್ತು ಸೆನ್ಸರ್‌ಗಳನ್ನು ಹೊಂದಿರುವ ಟೈಪ್-054 ವರ್ಗಕ್ಕೆ ಸೇರಿದ ಯುದ್ಧ ನೌಕೆಯು ಪಾಕಿಸ್ತಾನದ ನೌಕಾ ಪಡೆಯಲ್ಲಿರುವ ಆಧುನಿಕ ಯುದ್ಧನೌಕೆಗಳ ಪೈಕಿ ಒಂದಾಗಿದೆ.

ಎರಡು ‘ಟೈಪ್-054 ಎ/ಪಿ’ ಫ್ರಿಗೇಟ್ (ಯುದ್ಧ ನೌಕೆ)ಗಳ ಪೂರೈಕೆಗಾಗಿ ಪಾಕಿಸ್ತಾನವು ಚೀನಾ ಶಿಪ್‌ಬಿಲ್ಡಿಂಗ್ ಟ್ರೇಡಿಂಗ್ ಕಂಪೆನಿ ಲಿಮಿಟೆಡ್ (ಸಿಎಸ್‌ಟಿಸಿ)ನೊಂದಿಗೆ 2017ರಲ್ಲಿ ಕರಾರು ಮಾಡಿಕೊಂಡಿತ್ತು ಎಂದು ಚೀನಾದ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಚೀನಾವು ತನ್ನ ಸರ್ವ ಋತು ಮಿತ್ರದೇಶ ಪಾಕಿಸ್ತಾನಕ್ಕಾಗಿ ನಾಲ್ಕು ಆಧುನಿಕ ಫ್ರಿಗೇಟ್‌ಗಳನ್ನು ನಿರ್ಮಿಸಲಿದೆ ಎಂಬುದಾಗಿ ಅಧಿಕೃತ ಮಾಧ್ಯಮವು ಕಳೆದ ವರ್ಷ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News