ಭಾರತದಲ್ಲಿ 32.34 ಲಕ್ಷ ತಲುಪಿದ ಕೊರೋನ ಕೇಸ್, ಚೇತರಿಕೆಯ ದರ ಶೇ.76

Update: 2020-08-26 05:39 GMT

ಹೊಸದಿಲ್ಲಿ, ಆ.26: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಹೊಸತಾಗಿ 67,151 ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಹಾಗೂ 1,059 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಮೊದಲ ಬಾರಿ ಕೊರೋನ ಕೇಸ್ ಕಾಣಿಸಿಕೊಂಡ ಬಳಿಕ ಈ ತನಕ ಒಟ್ಟು 32,34,474 ಕೇಸ್‌ಗಳು ದಾಖಲಾಗಿವೆ. ಇದರಲ್ಲಿ 59,449 ಸಾವುಗಳು ಸಂಭವಿಸಿವೆ. ದೇಶದಲ್ಲಿ ಸೋಂಕಿನಿಂದ ಈ ತನಕ 24,67,758 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈಮೂಲಕ ದೇಶದಲ್ಲಿ ಚೇತರಿಕೆಯ ದರ ಶೇ.76.29ಕ್ಕೆ ತಲುಪಿದೆ.

 ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 7,03,823ಕ್ಕೇರಿಕೆಯಾಗಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ 10,425 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 329 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News