ಅಪರೂಪದ ಸಮಾರಂಭದಲ್ಲಿ ಅಮೆರಿಕದ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಾರತದ ಇಂಜಿನಿಯರ್ ಸುಧಾ

Update: 2020-08-26 08:24 GMT

 ವಾಷಿಂಗ್ಟನ್,ಆ.26: ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆದ ಅಪರೂಪದ ಸಮಾರಂಭದಲ್ಲಿ ಭಾರತದ ಸಾಫ್ಟ್‌ವೇರ್ ಡೆವಲಪರ್ ಸಹಿತ ಐವರು ವಲಸಿಗರು ಅಮೆರಿಕದ ಪ್ರಜೆಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರತಿಯೊಂದು ಜನಾಂಗ, ಧರ್ಮ ಹಾಗೂ ಬಣ್ಣವನ್ನು ಒಳಗೊಂಡಿರುವ ಭವ್ಯ ರಾಷ್ಟ್ರಕ್ಕೆ ಅಮೆರಿಕದ ನಾಯಕರು ಅವರನ್ನು ಸ್ವಾಗತಿಸಿದರು.

ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತ, ಬೊಲಿವಿಯಾ,ಲೆಬನಾನ್,ಸುಡಾನ್ ಹಾಗೂ ಘಾನಾ ಎಂಬ ಐದು ದೇಶಗಳ ವಲಸಿಗರು ಸರದಿ ಸಾಲಿನಲ್ಲಿ ನಿಂತಿದ್ದರು.

ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಚಾಡ್‌ವುಲ್ಫ್ ಅವರು ಪ್ರಮಾಣವಚನ ಬೋಧಿಸಿದರು. ಟ್ರಂಪ್ ಇದನ್ನೆಲ್ಲವನ್ನು ವೀಕ್ಷಿಸಿದರು. ಅಮೆರಿಕದ ಪ್ರಜೆಗಳಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಭಾರತದ ಸಾಫ್ಟ್‌ವೇರ್ ಡೆವಲಪರ್ ಸುಧಾ ಸುಂದರಿ ನಾರಾಯಣನ್ ಕೂಡಾ ಇದ್ದರು.

ನಮ್ಮ ಮಹಾನ್ ಅಮೆರಿಕದ ಕುಟುಂಬಕ್ಕೆ ನಾವು ಸಂಪೂರ್ಣವಾಗಿ ನಂಬಲಾಗದ ಐದು ಹೊಸ ಸದಸ್ಯರನ್ನು ಸ್ವಾಗತಿಸುತ್ತಿದ್ದಂತೆ ಇಂದು ಅಮೆರಿಕ ಸಂತೋಷಪಡುತ್ತದೆ. ನಿಮಗೆಲ್ಲರಿಗೂ ಅಭಿನಂದನೆಗಳು ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News