ಮಧ್ಯಪ್ರದೇಶ: ಮನೆ ಕುಸಿತ, 10 ತಿಂಗಳ ಮಗು ಸಹಿತ ಮೂವರು ಸಿಲುಕಿರುವ ಶಂಕೆ

Update: 2020-08-26 07:43 GMT

ಭೋಪಾಲ್, ಆ.26:ಇಲ್ಲಿಂದ 153 ಕಿ.ಮೀ.ದೂರದಲ್ಲಿರುವ ದೆವಾಸ್ ನಗರದಲ್ಲಿ ಎರಡು ಮಹಡಿಯ ಮನೆ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿ 10 ತಿಂಗಳ ಹಸುಳೆ ಸಹಿತ ಮೂವರು ಸಿಲುಕಿ ಹಾಕಿಕೊಂಡಿದ್ದು, ಸುಮಾರು 9 ಮಂದಿಯನ್ನು ರಕ್ಷಿಸಲಾಗಿದೆ ಎಂದು ಆಡಳಿತಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಬುಧವಾರ ಬೆಳಗ್ಗೆ ದೇವಾಸ್ ನಗರವನ್ನು ತಲುಪಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಆಟೋರಿಕ್ಷಾ ಚಾಲಕ ಝಾಕಿರ್ ಶೇಖ್ ಎಂಬುವವರಿಗೆ ಸೇರಿದ ಮನೆಯಲ್ಲಿ ಝಾಕಿರ್ ಸಹಿತ ನಾಲ್ವರು ಸಹೋದರರ ಕುಟುಂಬ ವಾಸವಾಗಿತ್ತು. ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ದುಸ್ಥಿತಿಯಲ್ಲಿದ್ದ ಮನೆ ಕುಸಿತಗೊಂಡಾಗ ಕುಟುಂಬದ ಪುರುಷರು ಮನೆಯಿಂದ ಹೊರಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News