×
Ad

ನಝೀರ್ ಅಹ್ಮದ್ ಅಝ್ಹರಿ ಹೂಡೆ ನಿಧನ

Update: 2020-08-26 16:43 IST

ಉಡುಪಿ: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷರೂ, ಆಧ್ಯಾತ್ಮಿಕ ನಾಯಕರೂ ಆದ ಮೌಲಾನಾ ನಝೀರ್ ಅಹ್ಮದ್ ಅಝ್ಹರಿ ಹೂಡೆ ಆ. 25ರಂದು ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. 

ಅವರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸುನ್ನೀ ಸಂಘಟನೆಗಳ ನಾಯಕರಾದ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಾಜಿ ಅಬೂಬಕರ್ ನೇಜಾರು, ಶಬೀರ್ ಸಖಾಫಿ ಉಚ್ಚಿಲ, ವೈಬಿಸಿ ಬಶೀರ್ ಅಲಿ ಮೂಳೂರು, ಇಕ್ಬಾಲ್ ಜನ್ಸಾಲೆ, ಸುಬ್ಹಾನ್ ಅಹ್ಮದ್ ಹೊನ್ನಾಳ, ಅಡ್ವಕೆಟ್ ಇಲ್ಯಾಸ್ ನಾವುಂದ, ಟಿ.ಎಮ್ ರಹ್ಮತುಲ್ಲ ಹೂಡೆ, ಅಶ್ರಫ್ ಹೂಡೆ , ಅಬ್ದುಲ್ ಹಮೀದ್ ಅದ್ದು,ವೈ,ಬಿ,ಸಿ ಬಾವ,ಕೆ.ಎಸ್.ಎಮ್ ಮನ್ಸೂರ್ ದೊಡ್ಡಣಗುಡ್ಡೆ, ಸಯ್ಯಿದ್ ಯೂಸುಫ್ ಹೂಡೆ ಮಯ್ಯಿತ್ ದರ್ಶನದಲ್ಲಿ ಪಾಲ್ಗೊಂಡಿದ್ದರು.

ಸಂತಾಪ

ಖಾಝಿ ಶೈಖುನಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು, ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಅಬ್ದುರ್ರಹ್ಮಾನ್ ಮದನಿ ಮೂಳೂರು, ಅಶ್ರಫ್ ಸಖಾಫಿ ಕನ್ನಂಗಾರ್, ಯು.ಕೆ.ಮುಸ್ತಫ ಸಅದಿ ಸುನ್ನೀ ಸೆಂಟರ್, ಅಶ್ರಫ್ ಅಂಜದಿ ಪಕ್ಷಿಕೆರೆ, ರವೂಫ್ ಖಾನ್ ಕುಂದಾಪುರ, ಅಬ್ದುರ್ರಶೀದ್ ಸಖಾಫಿ ಮಜೂರು ಹಾಗೂ ಮತ್ತಿತರ ನಾಯಕರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News