ಬಿವಿಟಿಯಲ್ಲಿ ಉಚಿತ ಎಂಬ್ರಾಯಿಡರಿ ತರಬೇತಿ
ಮಣಿಪಾಲ, ಆ.26: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಸೆ.7ರಿಂದ 2 ವಾರಗಳ ಉಚಿತ ಎಂಬ್ರಾಯಿಡರಿ, ಕಸೂತಿ ಹಾಗೂ ಇತರ ಕರಕುಶಲತೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಸ್ವ ಉದ್ಯೋಗ ಮಾಡಲು ಆಸಕ್ತಿ ಇರುವ ಮಹಿಳೆಯರು ಹಾಗೂ ಶಾಲಾ ಕಾಲೇಜು ಕಲಿಯುತ್ತಿರುವ/ ವಿದ್ಯಾಭ್ಯಾಸ ಮುಗಿಸಿರುವ ಮಹಿಳಾ ಅಭ್ಯರ್ಥಿ ಗಳು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ತರಬೇತಿ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿ ಊಟ, ಉಪಹಾರ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ವಿದ್ಯಾರ್ಹತೆಯನ್ನು ಬಿಳಿಹಾಳೆಯಲ್ಲಿ ಬರೆದು ಸೆ.3ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ಅನಂತ, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ -576102 ಈ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿಕೊಡಬೇಕು ಅಥವಾ ದೂರವಾಣಿ ಸಂಖ್ಯೆ: 0820-2570263, ಕಛೇರಿ ಮೊಬೈಲು ಸಂಖ್ಯೆ: 8970891031ನ್ನು ಸಂಪರ್ಕಿಸಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸ ಬಹುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.