ದ.ಕ. ಜಿಲ್ಲೆ: ಒಟ್ಟು 11 ಸಾವಿರದ ಗಡಿ ದಾಟಿದ ಕೊರೋನ ಪಾಸಿಟಿವ್ ಸಂಖ್ಯೆ
ಮಂಗಳೂರು, ಆ.26: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪ್ರಕರಣ ಬುಧವಾರ ಒಟ್ಟು 11 ಸಾವಿರದ ಗಟಿ ದಾಟಿದೆ. ಬುಧವಾರ 314 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಒಟ್ಟು 11,092 ಮಂದಿಗೆ ಸೋಂಕು ತಗುಲಿದೆ.
ಅದಲ್ಲದೆ ಹೊರ ಜಿಲ್ಲೆಯ 6, ಮಂಗಳೂರು ತಾಲೂಕಿನ 4 ಮತ್ತು ಬಂಟ್ವಾಳ ತಾಲೂಕಿನ 1 ಸಹಿತ ಬುಧವಾರ 11 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 330ಕ್ಕೇರಿದೆ.
ಬುಧವಾರ ಪಾಸಿಟಿವ್‌ಗೊಳಗಾದ 314 ಮಂದಿಯಲ್ಲಿ ಮಂಗಳೂರಿನ 215, ಬಂಟ್ವಾಳದ 52, ಪುತ್ತೂರಿನ 8, ಸುಳ್ಯದ 2, ಬೆಳ್ತಂಗಡಿಯ 10 ಮತ್ತು ಇತರ ಜಿಲ್ಲೆಯ 27 ಮಂದಿ ಸೇರಿದ್ದಾರೆ.
ಈವರೆಗೆ ದ.ಕ.ಜಿಲ್ಲೆಯ 87,945 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 11,092 ಮಂದಿಯ ವರದಿ ಪಾಸಿಟಿವ್ ಬಂದಿದ್ದರೆ, 75,853 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‌ನಿಂದ 2, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 245 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 49 ಮಂದಿಯ ಸಹಿತ ಬುಧವಾರ 296 ಮಂದಿ ಗುಣಮುಖರಾಗಿ ಕೊರೋನ ಸೋಂಕಿನಿಂದ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 8427ಕ್ಕೇರಿದೆ. ಜಿಲ್ಲೆಯಲ್ಲಿ 2339 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.