×
Ad

ಬಂಟ್ವಾಳ : ವಿಕಲಚೇತನ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Update: 2020-08-26 20:00 IST

ಮಂಗಳೂರು, ಆ.26: ಬಂಟ್ವಾಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಪಂಗೆ ಒಬ್ಬರಂತೆ ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದ ವಿಕಲಚೇತನ (ಅಂಗಲವಿಕಲ)ರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆರೆಂದು ನೇಮಕ ಮಾಡಲು ಅವಕಾಶವಿದ್ದು ಅವರಿಗೆ ಮಾಸಿಕ 6,000 ರೂ. ಗೌರವಧನವನ್ನು ನೀಡಲಾಗುತ್ತದೆ.

ಗೋಳ್ತಮಜಲು, ಕರಿಯಂಗಳ, ಕಳ್ಳಿಗೆ, ಅಮ್ಮುಂಜೆ, ನರಿಕೊಂಬು, ಇರ್ವತ್ತೂರು, ಸಜೀಪ ಮುನ್ನೂರು, ಬಾಳ್ತಿಲ, ನಾವೂರು, ಸಜಿಪ ಮೂಡ, ಉಳಿ, ಬಾಳೆಪುಣಿ, ಪುದು, ತುಂಬೆ, ಕುರ್ನಾಡು, ಫಜೀರು, ಸಜೀಪ ನಡು, ಸಜೀಪ ಪಡು, ಮೇರಮಜಲು, ಪಂಜಿಕಲ್ಲು ಹಾಗೂ ಬಡಗಬೆಳ್ಳೂರು ಗ್ರಾಪಂಗಳಲ್ಲಿ ಹುದ್ದೆ ಖಾಲಿ ಇವೆ. ಆಸಕ್ತರು ಸೆ.21ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕೈಕುಂಜೆ ಬಿ.ಸಿ.ರೋಡ್ ಬಂಟ್ವಾಳ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂ.ಸಂ: 08255 232465ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News