×
Ad

ಆ.27: ‘ಎಚ್‌ಐಎಫ್’ವತಿಯಿಂದ ನಿರ್ಮಿಸಲಾದ ‘ಮನೆ’ ಹಸ್ತಾಂತರ

Update: 2020-08-26 20:07 IST

ಮಂಗಳೂರು, ಆ.26: ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ‘ಎಚ್‌ಐಎಫ್ ಇಂಡಿಯಾ ಪ್ರೊಜೆಕ್ಟ್ ಆಶಿಯಾನ’ದ ಮೂಲಕ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಯೋಜನೆಯಡಿ ನೆಲ್ಯಾಡಿ ಸಮೀಪದ ಅರ್ಲ ಎಂಬಲ್ಲಿ ನಿರ್ಮಿಸಲಾದ 20ನೆ ಮನೆಯ ಹಸ್ತಾಂತರ ಕಾರ್ಯಕ್ರಮವು ಆ.27 ರಂದು ಸಂಜೆ 4:30ಕ್ಕೆ ನೆಲ್ಯಾಡಿಯ ಆರ್ಲದಲ್ಲಿ ನಡೆಯಲಿದೆ.

ಮಂಗಳೂರಿನ ಮಸ್ಜಿದುಲ್ ಇಹ್ಸಾನ್‌ನ ಖತೀಬ್ ಮೌಲಾನಾ ಅಲ್ತಾಫ್ ಹುಸೈನ್ ಮುಖ್ಯ ಅತಿಥಿಗಳಾಗಿದ್ದಾರೆ. ಕೋಲ್ಪೆ ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬ್ ಮುಹಮ್ಮದ್ ಶರೀಫ್ ದಾರಿಮಿ, ಉದ್ಯಮಿ ಖಾಲಿದ್, ಎಚ್‌ಐಎಫ್ ಅಧ್ಯಕ್ಷ ಸಾಜಿದ್ ಎ.ಕೆ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮನೆಯೇ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವ ಈ ಯೋಜನೆಯಡಿ ಈಗಾಗಲೆ ಜಿಲ್ಲೆಯ ವಿವಿಧ ಕಡೆ 19 ಮನೆಗಳನ್ನು ನಿರ್ಮಿಸಲಾಗಿದೆ. ಇದೀಗ 20ನೆ ಮನೆಯ ನಿರ್ಮಾಣ ಕಾರ್ಯವು ಪೂರ್ತಿಗೊಂಡಿದ್ದು, ಆ.27ರಂದು ಮನೆಯ ಕೀ ಹಸ್ತಾಂತರಿಸಲಾಗುವುದು ಎಂದು ಎಚ್‌ಐಎಫ್ ಪ್ರೊಜೆಕ್ಟ್ ಆಶಿಯಾನದ ಸಂಚಾಲಕ ನಾಝಿಮ್ ಎ.ಕೆ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News