ಕೆಎಸ್‌ಎಲ್ಯು ವಿವಿ ಪರೀಕ್ಷೆ ಹಿಂಪಡೆಯಲು ಎಸ್‌ಐಓ ಆಗ್ರಹ
Update: 2020-08-26 20:11 IST
ಉಡುಪಿ, ಆ.26: ಈಗಾಗಲೇ ರಾಜ್ಯ ಸರಕಾರ ಅಂತಿಮ ಸೆಮಿಸ್ಟರ್ ಹೊರತು ಪಡಿಸಿ ಬೇರೆಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಂತೆ ನಿರ್ದೇಶಿಸಿ ಆದೇಶ ಹೊರಡಿಸಿದ ಹೊರತಾಗಿಯೂ ಕೆ.ಎಸ್.ಎಲ್.ಯು. ವಿಶ್ವವಿದ್ಯಾಲಯ ಪಠ್ಯಕ್ರಮ ಪೂರ್ಣವಾಗದೇ ಪರೀಕ್ಷೆ ನಡೆಸಲು ಹೊರ ಟಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಎಸ್‌ಐಓ ಉಡುಪಿ ಜಿಲ್ಲಾ ಘಟಕ ಆರೋಪಿಸಿದೆ.
ಕೊರೊನಾ ಸೋಂಕಿನಿಂದಾಗಿ ಬೋಧನಾ ತರಗತಿಗಳು ನಡೆಯದೆ ಅರ್ಧ ದಷ್ಟೂ ಪಠ್ಯಕ್ರಮವೇ ಪೂರ್ಣಗೊಳ್ಳದ ಹಿನ್ನೆಲೆಯಲಿ ಸೆಮಿಸ್ಟರ್ ಪರೀಕ್ಷೆ ಗಳನ್ನು ನಡೆಸುವ ನಿರ್ಧಾರವನ್ನು ರಾಜ್ಯ ಕಾನೂನು ವಿವಿಯು ಕೈಬಿಟ್ಟು ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಎಸ್‌ಐಓ ಉಡುಪಿ ಜಿಲ್ಲಾಧ್ಯಕ್ಷ ನಾಸೀರ್ ಹೂಡೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.