×
Ad

ದ.ಕ.ಜಿಲ್ಲಾ ಕೋವಿಡ್ ಕಾಂಗ್ರೆಸ್ ಹೆಲ್ಪ್‌ಲೈನ್ ಸಭೆ

Update: 2020-08-26 20:14 IST

ಮಂಗಳೂರು, ಆ.26: ದ.ಕ.ಜಿಲ್ಲಾ ಕೋವಿಡ್ ಕಾಂಗ್ರೆಸ್ ಹೆಲ್ಪ್‌ಲೈನ್ ಸಭೆಯು ಬುಧವಾರ ಡಿಸಿಸಿ ಭವನದಲ್ಲಿ ಜಿಲ್ಲಾ ಕೋವಿಡ್ ಕಾಂಗ್ರೆಸ್ ಹೆಲ್ಪ್‌ಲೈನ್ ಸಮಿತಿಯ ಸಂಚಾಲಕ ಐವನ್ ಡಿಸೋಜರ ಅಧ್ಯಕ್ಷತೆಯಲ್ಲಿ ಜರುಗಿತು.

ಕೋವಿಡ್ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ವಿಫಲವಾಗಿದೆ. ದಿನದಿಂದ ದಿನಕ್ಕೆ ಕೋವಿಡ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಕೋವಿಡ್‌ನಲ್ಲಿ ಮೃತರಾದವರಿಗೆ ಸರಕಾರದಿಂದ ಪರಿಹಾರ ನೀಡಲು ಸಭೆಯು ಆಗ್ರಹಿಸಿದೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಆಯುಷ್ಮಾನ್ ಕಾರ್ಡ್ ಇಲ್ಲದೆ ಕೋವಿಡ್ ರೋಗದಿಂದ ಬಳಲುತ್ತಿರುವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸು ತ್ತಿರುವುದರಿಂದ ಕಾಂಗ್ರೆಸ್ ಹೆಲ್ಪ್‌ಲೈನ್ ಘಟಕದ ವತಿಯಿಂದ ಜಿಲ್ಲಾದ್ಯಂತ ಕ್ಯಾಂಪ್‌ಗಳನ್ನು ನಡೆಸಿ ಉಚಿತವಾಗಿ ಆರೋಗ್ಯ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಿಸುವ ಕಾರ್ಯಕ್ರಮವನ್ನು ಆಂದೋಲನವನ್ನಾಗಿಸಲು ಸಭೆ ನಿರ್ಧರಿಸಿತು.

ಸಭೆಯಲ್ಲಿ ಶಾಸಕ ಯು.ಟಿ.ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾರ್ಪೋರೇಟರುಗಳಾದ ಶಶಿಧರ್ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಅನಿಲ್ ಕುಮಾರ್, ಮಾಜಿ ಮೇಯರ್ ಎಂ.ಹರಿನಾಥ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತ್‌ಬೈಲ್, ದೀಪಕ್ ಪೂಜಾರಿ, ಸತೀಶ್ ಪೆಂಗಳ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಂತಳಾ ಗಟ್ಟಿ, ಶೋಭಾ ಕೇಶವ, ಮಾಜಿ ಕಾರ್ಪೋರೇಟರ್ ಅಪ್ಪಿ, ನವಾಝ್, ಸಂತೋಷ್ ಶೆಟ್ಟಿ, ಮಹೇಶ್ ಕೋಡಿಕಲ್, ವಹಾಬ್ ಕುದ್ರೋಳಿ, ಅನಿಲ್ ಬಿಜೈ, ರಜನೀಶ್ ಕಾಪಿಕಾಡ್, ಮುದಸ್ಸಿಲ್ ಕುದ್ರೋಳಿ, ಕವಿತಾ ಸನಿಲ್, ಚೇತನ್ ಕುಮಾರ್, ಗಿರೀಶ್ ಶೆಟ್ಟಿ, ಶರತ್ ಹೊಗೆಬಜಾರ್, ಮುಹಮ್ಮದ್ ನವಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News