1 ಜಿಬಿಗೆ 100 ರೂ.: ಏರ್ ಟೆಲ್ ಗ್ರಾಹಕರ ಜೇಬಿಗೆ ಶೀಘ್ರ ಬೀಳಲಿದೆ ಕತ್ತರಿ!

Update: 2020-08-26 15:54 GMT

ಹೊಸದಿಲ್ಲಿ: ಏರ್ ಟೆಲ್ ರಿಚಾರ್ಜ್ ದರ ಹೆಚ್ಚಾಗುವ ಸುಳಿವನ್ನು ಭಾರ್ತಿ ಏರ್ ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಏರ್ ಟೆಲ್ ಬಳಕೆದಾರರ ಹೆಚ್ಚು ಪಾವತಿಸಲು ಸಿದ್ಧರಾಗಿರಬೇಕು  ಎಂದಿದ್ದಾರೆ.

160 ರೂ.ಗೆ 16 ಜಿಬಿ ಡಾಟಾ ಪಡೆಯುವ ಬದಲು ಕೇವಲ 1.6ಜಿಬಿ ಡಾಟಾವನ್ನು ಗ್ರಾಹಕರು ಪಡೆಯಲಿದ್ದಾರೆ ಎಂದವರು ಹೇಳಿದ್ದಾರೆ. ಇದರರ್ಥ ಏರ್ ಟೆಲ್ ಗ್ರಾಹಕರು ಪ್ರತಿ 1 ಜಿಬಿ ಡಾಟಾಗೆ 100 ರೂ. ಪಾವತಿಸಬೇಕಾಗಿದೆ.

“ನೀವು ತಿಂಗಳಿಗೆ 1.6ಜಿಬಿ ಡಾಟಾ ಬಳಸಲು ಸಿದ್ಧರಾಗಿಬೇಕು ಅಥವಾ ಹೆಚ್ಚು ಪಾವತಿಸಲು ಸಿದ್ಧರಾಗಿರಬೇಕು. ನಮಗೆ ಅಮೆರಿಕ ಯುರೋಪ್ ನಂತೆ 3700ರಿಂದ 4,400 ರೂಪಾಯಿ ಬೇಡ. ಆದರೆ ತಿಂಗಳಿಗೆ 16 ಜಿಬಿ ಸಮಂಜಸವಲ್ಲ” ಎಂದರು.

ಸದ್ಯ ಏರ್ ಟೆಲ್ 24 ದಿನಗಳ ಕಾಲ ಪ್ರತಿದಿನ 1 ಜಿಬಿ ಡಾಟಾ ನೀಡುತ್ತಿದೆ (199 ರೂ.ಗೆ). ಆದರೆ ಇನ್ನು ಮುಂದಿನ ದಿನಗಳಲ್ಲಿ 24 ದಿನಗಳ ಕಾಲ ಅದು ಗ್ರಾಹಕರಿಗೆ ಕೇವಲ 2.4ಜಿಬಿ ಮಾತ್ರ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News