‘ಬ್ಯಾಡ್‌ಬಾಯ್ ಬಿಲಿಯನೇರ್ಸ್’ ವೆಬ್‌ ಸೀರಿಸ್ ವಿರುದ್ಧ ಹೈಕೋರ್ಟ್‌ನಲ್ಲಿ ಮೆಹುಲ್ ಚೋಕ್ಸಿ ಅರ್ಜಿ

Update: 2020-08-26 17:04 GMT

ಹೊಸದಿಲ್ಲಿ, ಆ.26: ಬಹುಕೋಟಿ ಮೊತ್ತದ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ‘ಬ್ಯಾಡ್‌ಬಾಯ್ ಬಿಲಿಯನೇರ್ಸ್’ ಎಂಬ ವೆಬ್‌ಸರಣಿ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

 ಭಾರತದ ‘ಕುಖ್ಯಾತ’ ಬಿಲಿಯನರ್‌ಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಸುಬ್ರತಾ ರಾಯ್ ಮತ್ತು ರಾಮಲಿಂಗ ರಾಜು ಕುರಿತು ‘ಬ್ಯಾಡ್‌ಬಾಯ್ ಬಿಲಿಯನರೀಸ್’ ವೆಬ್‌ಸರಣಿಯಲ್ಲಿ ಬೆಳಕು ಚೆಲ್ಲಲಾಗುವುದು ಎಂಬ ವರದಿಯ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮ ಪ್ರಸಾರಕ್ಕೆ ತಡೆಯಾಜ್ಞೆ ಕೋರಿ ತನ್ನ ವಕೀಲರ ಮೂಲಕ ಚೋಕ್ಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

13,500 ಕೋಟಿ ರೂ. ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಜ್ರೋದ್ಯಮಿ ಚೋಕ್ಸಿ, ಕಳೆದ ವರ್ಷ ಭಾರತದಿಂದ ಪರಾರಿಯಾಗಿದ್ದು ಆಂಟಿಗ್ವಾ ಮತ್ತು ಬರ್ಬುಡಾ ದೇಶದ ಪೌರತ್ವ ಪಡೆದಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸರಣಿ ಕಾರ್ಯಕ್ರಮ ಸೆಪ್ಟೆಂಬರ್ 2ರಿಂದ ಪ್ರಸಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News