ಮುಡಿಪು : ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ

Update: 2020-08-26 17:14 GMT

ಮುಡಿಪು, ಆ. 26: ಸರಕಾರಿ ಆಸ್ಪತ್ರೆಯನ್ನು ಬಲಪಡಿಸಲು, ಖಾಸಗಿ ಆಸ್ಪತ್ರೆಯನ್ನು ನಿಯಂತ್ರಿಸಲು ಹಾಗೂ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ, ಕೊರೋನ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ ದಂಧೆ ಮಾಡುತ್ತಿರುವುದಾಗಿ ಮತ್ತು ಅದನ್ನು ಖಂಡಿಸಿ, ಎಲ್ಲರಿಗೂ ಸಮಾನ ಗುಣಮಟ್ಟದ ಉಚಿತ ಚಿಕಿತ್ಸೆಗಾಗಿ ಒತ್ತಾಯಿಸಿ ಇಂದು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಮುಡಿಪು ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಡಿವೈಎಫ್ಐ, ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಹಾಗೂ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮಾತನಾಡಿದರು.

ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಉಪಾಧ್ಯಕ್ಷ ರಝಾಕ್ ಮೊಂಟೆಪದವು , ಕೋಶಾಧಿಕಾರಿ ಅಶ್ರಫ್ ಹರೇಕಳ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು, ಕಾರ್ಯದರ್ಶಿ ಜಗದೀಶ್ ದೇರಳಕಟ್ಟೆ, ಡಿವೈಎಫ್ಐ ಮುಡಿಪುಘಟಕಾಧ್ಯಕ್ಷ ರಝಾಕ್, ಕಾರ್ಯದರ್ಶಿ ರಿಯಾಝ್, ಬಾಳೆಪುಣಿ ಕೈರಂಗಳ ಘಟಕಾಧ್ಯಕ್ಷ ಅಲಿ ಕಾಯಾರ್, ಕಾರ್ಯದರ್ಶಿ ಖಲಂದರ್, ದೇರಳಕಟ್ಟೆ ಘಟಕಾಧ್ಯಕ್ಷ ನವಾಝ್ ಉರುಮಣೆ, ಕೊಲ್ಲರಕೋಡಿ ಘಟಕಾಧ್ಯಕ್ಷ ಆಸಿಫ್ ಕೆ.ಎಚ್, ಮುಖಂಡರಾದ ಶರೀಫ್ ವಿದ್ಯಾನಗರ, ನಿಝಾರ್ ಮುಡಿಪು, ಶಾಫಿ ಮುಡಿಪು, ನಿಜಾರ್ ಬಿಕೆ ಕಾಯಾರ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News