ಪುತ್ತೂರು, ಕಡಬ ತಾಲೂಕಿನಲ್ಲಿ 11 ಕೊರೋನ ಪಾಸಿಟಿವ್ ಪತ್ತೆ
Update: 2020-08-27 14:09 IST
ಪುತ್ತೂರು, ಆ.27: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ ಒಟ್ಟು 11 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಪುತ್ತೂರು ತಾಲೂಕಿನ ಮುಂಡೂರು ನಿವಾಸಿ 23 ವರ್ಷದ ಪುರುಷ, ಉಪ್ಪಿನಂಗಡಿ ನಿವಾಸಿ 28 ವರ್ಷದ ಮಹಿಳೆ, 70 ವರ್ಷದ ವೃದ್ಧ, ನರಿಮೊಗರು ನಿವಾಸಿ 42 ವರ್ಷದ ಮಹಿಳೆ, ಆರ್ಯಾಪು ನಿವಾಸಿ 40 ವರ್ಷದ ಮಹಿಳೆ, ಪುತ್ತೂರು ನಗರಸಭಾ ವ್ಯಾಪ್ತಿಯ ದರ್ಬೆ ನಿವಾಸಿ 47 ವರ್ಷದ ಪುರುಷ, ಕಾವೇರಿಕಟ್ಟೆ ನಿವಾಸಿ 67 ವರ್ಷದ ಪುರುಷ ಮತ್ತು 65 ವರ್ಷದ ಮಹಿಳೆ, ಎಪಿಎಂಸಿ ರಸ್ತೆ ನಿವಾಸಿ 64 ವರ್ಷದ ಪುರುಷರೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.
ಕಡಬ ತಾಲೂಕಿನ ಕುದ್ಮಾರು ನಿವಾಸಿ 40 ವರ್ಷದ ಮಹಿಳೆ, 19 ವರ್ಷದ ಯುವಕನಲ್ಲಿ ಕೊರೋನ ದೃಢಪಟ್ಟಿದೆ.
ಇದರೊಂದಿಗೆ ಈ ತನಕ ಉಭಯ ತಾಲೂಕುಗಳಲ್ಲಿ ದೃಢಪಟ್ಟ ಒಟ್ಟು ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 582ಕ್ಕೆ ಏರಿಕೆಯಾಗಿದೆ.