ಡ್ರಗ್ಸ್ ಬಳಕೆ: ಕರ್ನಾಟಕದ ಹಲವು ನಟರು, ಸಂಗೀತಗಾರರ ಮೇಲೆ ನಾರ್ಕಾಟಿಕ್ಸ್ ಬ್ಯುರೋ ನಿಗಾ

Update: 2020-08-27 11:22 GMT

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋ ಪ್ರಮುಖ ಡ್ರಗ್ಸ್ ಸಾಗಾಟ ಜಾಲವನ್ನು ಬೇಧಿಸಿದ  ನಂತರ  ರಾಜ್ಯದ ಹಲವು ‘ಪ್ರಮುಖ ಸಂಗೀತಗಾರರು ಹಾಗೂ ನಟರ' ಮೇಲೆ ಬ್ಯುರೋ ಹದ್ದಿನ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.

ಈ ಜಾಲದ ಆರೋಪಿಗಳು ಖ್ಯಾತ ಸಂಗೀತಗಾರರು, ನಟರು, ಕಾಲೇಜು ವಿದ್ಯಾರ್ಥಿಗಳು ಯುವಕರು ಹಾಗೂ ಶ್ರೀಮಂತ ವರ್ಗಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಮಾಹಿತಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ ಮೆಂಟ್‍ ನಿಂದ  ಬ್ಯುರೋ 145 ಎಂಡಿಎಂಎ ಗುಳಿಗೆಗಳು ಹಾಗೂ ರೂ  2.20 ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಂಡಿದ್ದರೆ, ನಂತರ ಬೆಂಗಳೂರಿನ ನಿಕೂ ಹೋಮ್ಸ್‍ನಿಂದ  96 ಎಂಡಿಎಂಎ ಗುಳಿಗೆಗಳು ಹಾಗೂ 180 ಎಲ್‍ಎಸ್‍ಡಿ ಬ್ಲಾಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬ್ಯುರೋ ಉಪನಿರ್ದೇಶಕ ಕೆ ಪಿ ಎಸ್ ಮಲ್ಹೋತ್ರ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನಂತರ ಈ ಜಾಲದ ರೂವಾರಿಯಾಗಿರುವ ಮಹಿಳೆಯನ್ನು ಬಂಧಿಸಿ ಆಕೆಯ ಬೆಂಗಳೂರಿನ ದೊಡ್ಡಗುಬ್ಬಿ ಪ್ರದೇಶದ ಮನೆಯಿಂದ 270 ಎಂಡಿಎಂಎ ಗುಳಿಗೆಗಳನ್ನು ವಶಪಡಿಸಲಾಗಿತ್ತು. ಎ ಅನೂಪ್, ಆರ್ ರವೀಂದ್ರನ್ ಹಾಗೂ ಅನಿಖಾ ಡಿ ಎಂಬ ಮೂವರನ್ನು ಈ ದಾಳಿಗಳಲ್ಲಿ ಬಂಧಿಸಲಾಗಿದೆ, ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಯಿದೆ'' ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News