‘ಕೊರೋನ ಹರಡಿದೆ ಎಂದು ಒಂದು ಸಮುದಾಯವನ್ನು ದೂಷಿಸುವಂತಾಗುವುದು ಬೇಡ’

Update: 2020-08-27 10:57 GMT

ಹೊಸದಿಲ್ಲಿ: ಮುಹರ್ರಂ ಆಚರಣೆ ವೇಳೆ ಮೆರವಣಿಗೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನಿರಾಕರಿಸಿದೆಯಲ್ಲದೆ, ಇಡೀ ದೇಶಕ್ಕೆ ಅನ್ವಯವಾಗುವಂತಹ ಇಂತಹ ಒಂದು ವಿಚಾರದಲ್ಲಿ ಅನುಮತಿ ನೀಡಿದರೆ ಅದು ಕೊರೋನ ಹರಡುವಿಕೆಗೆ ಒಂದು ನಿರ್ದಿಷ್ಟ ಸಮುದಾಯವನ್ನು ದೂಷಿಸುವುದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.

ಮೆರವಣಿಗೆಗೆ ಅನುಮತಿ  ಕೋರಿ ಅಲಹಾಬಾದ್ ಹೈಕೋರ್ಟ್‍ಗೆ ಅಪೀಲು ಸಲ್ಲಿಸಿ ಎಂದು ಅಪೀಲುದಾರ, ಲಕ್ನೋ ಮೂಲದ ಶಿಯಾ ನಾಯಕ ಸೈಯದ್ ಕಲ್ಬೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಾಗೂ ನ್ಯಾಯಮುರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಹೇಳಿದೆ.

“ನಿಮ್ಮ ಅಪೀಲಿಗೆ ಅನುಮತಿಸಿದರೆ ಅದು ದೇಶಾದ್ಯಂತ ಒಂದು ಸಮುದಾಯವನ್ನು ಕೋವಿಡ್ ಹರಡುವಿಕೆಗೆ ದೂಷಿಸುವುದಕ್ಕೆ ಕಾರಣವಾಗಬಹುದು. ಹಾಗಾಗುವುದು ನಮಗೆ ಬೇಡ. ನ್ಯಾಯಾಲಯ ಎಲ್ಲಾ ಜನರ ಆರೋಗ್ಯಕ್ಕೆ ಅಪಾಯವೊಡ್ಡಲು ಬಯಸುವುದಿಲ್ಲ'' ಎಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News