ಕಣ್ಣೂರು-ಕಲ್ಲಾಪು: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ; 2 ಟಿಪ್ಪರ್ ಸಹಿತ 44 ಲೋಡ್ ಮರಳು ವಶ
Update: 2020-08-27 19:45 IST
ಮಂಗಳೂರು, ಆ.27: ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಕಣ್ಣೂರು ಬಡಿಲ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಸಿಸಿಬಿ ಪೊಲೀಸರು ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 2 ಟಿಪ್ಪರ್ ಹಾಗೂ ದಾಸ್ತಾನು ಇರಿಸಿದ್ದ 44 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 9,91,000 ರೂ. ಎಂದು ಅಂದಾಜಿಸಲಾಗಿದೆ.
ನೇತ್ರಾವತಿ ನದಿ ತಟದಲ್ಲಿರುವ ಈ ಎರಡು ಪ್ರದೇಶದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್.ನಾಯಕ್, ಉರ್ವ ಇನ್‌ಸ್ಪೆಕ್ಟರ್ ಶರೀಫ್, ಸಂಚಾರ ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ಗುರುದತ್ ಕಾಮತ್, ಸಿಸಿಬಿ ಎಸ್ಸೈ ಕಬ್ಬಾಳ್‌ರಾಜ್ ಪಾಲ್ಗೊಂಡಿದ್ದರು.