ಅಮೆಝಾನ್ ಕಾಡ್ಗ್ಚಿಚ್ಚುಗಳಿಂದ ದಟ್ಟಾರಣ್ಯದ ಗಾಳಿ ವಿಷಮಯ: ಅಧ್ಯಯನ ವರದಿ
ರಿಯೋ ಡಿ ಜನೈರೊ (ಬ್ರೆಝಿಲ್), ಆ. 27: ಅಮೆಝಾನ್ ದಟ್ಟಾರಣ್ಯದಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಡ್ಗಿಚ್ಚುಗಳು ಜಗತ್ತಿನ ಅತಿ ದೊಡ್ಡ ಅರಣ್ಯದ ಗಾಳಿಯನ್ನು ವಿಷಮಯಗೊಳಿಸುತ್ತಿವೆ ಹಾಗೂ ಇದರಿಂದಾಗಿ ಕೋವಿಡ್-19ರಿಂದಾಗಿ ಈಗಾಗಲೇ ಸಂಕಷ್ಟಕ್ಕೀಡಾಗಿರುವ ಈ ವಲಯದಲ್ಲಿ ಉಸಿರಾಟದ ಸಮಸ್ಯೆ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಬುಧವಾರ ಪ್ರಕಟಗೊಂಡ ಅಧ್ಯಯನ ವರದಿಯೊಂದು ತಿಳಿಸಿದೆ.
ಬ್ರೆಝಿಲ್‌ನ ವ್ಯಾಪ್ತಿಯಲ್ಲಿ ಬರುವ ಅಮೆಝಾನ್ ಅರಣ್ಯದಲ್ಲಿ ಕಳೆದ ವರ್ಷ ಸಂಭವಿಸಿದ ಸರಣಿ ಕಾಡ್ಗಿಚ್ಚುಗಳಿಂದಾಗಿ ಉತ್ಪತ್ತಿಯಾದ ಹೊಗೆಯನ್ನು ಸೇವಿಸಿ ಈ ವಲಯದ ಸುಮಾರು 2,195 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ಗಾಳಿಯನ್ನು ಸೇವಿಸಿದ ಬಳಿಕ ಅವರು ಶ್ವಾಸಕೋಶದ ಕಾಯಿಲೆಗಳಿಗೆ ಗುರಿಯಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಈ ಅಧ್ಯಯನವನ್ನು ಹ್ಯೂಮನ್ ರೈಟ್ಸ್ ವಾಚ್ ಎಂದ ಮಾನವಹಕ್ಕುಗಳ ಸಂಘಟನೆಯು ಬ್ರೆಝಿಲ್‌ನ ಅವೆುಝಾನ್ ಪರಿಸರ ಸಂಶೋಧನಾ ಸಂಂಸ್ಥೆ (ಐಪಿಎಎಮ್) ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಪಾಲಿಸಿ ಸ್ಟಡೀಸ್ (ಐಇಪಿಎಸ್)ಗಳ ಸಹಯೋಗದೊಂದಿಗೆ ನಡೆಸಿದೆ.
ಕಲುಷಿತ ಗಾಳಿ ಸೇವಿಸಿ ಅಸ್ವಸ್ಥಗೊಂಡವರಲ್ಲಿ 477 ಶಿಶುಗಳು ಮತ್ತು 1,080 ಮಂದಿ 60ಕ್ಕಿಂತ ಹೆಚ್ಚು ವರ್ಷದವರು ಸೇರಿದ್ದಾರೆ. ಆಸ್ಪತ್ರೆಗೆ ದಾಖಲಾದವರಲ್ಲಿ 60 ವರ್ಷಕ್ಕಿಂತ ಹೆಚ್ಚಿನವರು 70 ಶೇಕಡದಷ್ಟಿದ್ದಾರೆ.