×
Ad

ಇಂಡಿಯಾ ಸೈಕಲ್ ಫಾರ್ ಚೇಂಜ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ

Update: 2020-08-27 20:15 IST

ಮಂಗಳೂರು, ಆ.27: ಇಂಡಿಯಾ ಸೈಕಲ್ ಫಾರ್ ಚೇಂಜ್ ಎಂಬ ಸ್ಪರ್ಧೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿ. ಭಾಗವಹಿಸುತ್ತಿದ್ದು, ಈ ಸ್ಪರ್ಧೆಯ ಭಾಗವಾಗಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ನಾಗರಿಕರ ಆದ್ಯತೆಗಳು ಹಾಗೂ ನಗರಕ್ಕೆ ಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ಸಮೀಕ್ಷೆಯ ಮೂಲಕ ನಾಗರಿಕರು ತಿಳಿಸಬಹುದು. ಈ ಸೂಚನೆ ಹಾಗೂ ಸಲಹೆಗಳನ್ನು ನೀಡುವ ಮೂಲಕ ನಾಗರಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿ ಮಂಗಳೂರಿಗೆ ಬೇಕಾದ ವ್ಯವಸ್ಥೆಯನ್ನು ಒದಗಿಸುವಲ್ಲಿ ಸಹಕರಿಸಬಹುದಾಗಿದೆ.
ಈ ಸಮೀಕ್ಷೆ ಆನ್‌ಲೈನ್ ಮೂಲಕ ನಡೆಯಲಿದೆ.ಲಿಂಕ್ ಮಾಡುವ ಮೂಲಕ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್ ಸಿಟಿ ಲಿ. ದೂ.ಸಂ: 0824-2986321 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News